
ಚಾಮರಾಜನಗರ: ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತನೋರ್ವ ತಾನು ಪಡೆದಿದ್ದ ಸಾಲಮನ್ನಾವಾಗದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುದೇರು ಠಾಣಾ ವ್ಯಾಪ್ತಿಯ ದೇಮನಹಳ್ಳಿಯಲ್ಲಿ ನಡೆದಿದೆ.
ಚಿಕ್ಕಸ್ವಾಮಿ(45) ಎಂಬ ರೈತ ಕಳೆದ ಫೆಬ್ರವರಿಯಲ್ಲಿ ಸಹಕಾರ ಸಂಘದಿಂದ 40 ಸಾವಿರ ರೂ. ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲಮನ್ನಾದ ಕುರಿತು ಬಹು ನಿರೀಕ್ಷೆ ಇಟ್ಟುಕೊಂಡಿದ್ದರು.
ಕಳೆದ 8 ತಿಂಗಳಿನ ಹಿಂದೆ ಆಪರೇಷನ್ ಗಾಗಿ 70 ಸಾವಿರ, ಮಗುವಿನ ಚಿಕಿತ್ಸೆಗಾಗಿ 1 ಲಕ್ಷ ಖಾಸಗಿಯಾಗಿ ಸಾಲ ಮಾಡಿದ್ದ ಚಿಕ್ಕಸ್ವಾಮಿ ಅವರು ಸಾಲಕ್ಕೆ ಬೇಸತ್ತು ರಾತ್ರಿ 1 ರ ವೇಳೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.
ನೇಣು ಹಾಕಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.