
ಬೆಂಗಳೂರು[ಮೇ.30]: ಸಿಎಂ ಮತ್ತು ದೇವೆಗೌಡ ಕುಟುಂಬ ವಿರುದ್ದ ಅವಹೇಳನಾಕಾರಿ ಪೋಸ್ಟ್ ಶೇರ್ ಮಾಡಲಾದ ಟ್ರೋಲ್ ಮಗ ಫೇಸ್ ಬುಕ್ ಪೇಜ್ ಅಡ್ಮಿನ್ ಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಎಚ್. ಡಿ ರೇವಣ್ಣ ಹೇಳಿಕೆ ಕುರಿತಾಗಿ ಟ್ರೋಲ್ ಮಾಡಿರುವುದೇ ಈಗ ಸಂಕಷ್ಟವಾಗಿ ಮಾರ್ಪಾಡಾಗಿದೆ.
2014 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮೋದಿ ಪ್ರಧಾನಿಯಾದರೆ ದೇಶ ಬಿಡ್ತೀನಿ ಎಂದಿದ್ದರು, 2018ರಲ್ಲಿ ಜೆಡಿಎಸ್ ಗೆ ಬಹುಮತ ಸಿಗದಿದ್ದಲ್ಲಿ ನಾನು ರಾಜಕೀಯ ಬಿಡುತ್ತೇನೆ ಎಂದು ಕುಮಾರ್ಸವಾಮಿ ಹೆಳಿದ್ದರು ಹಾಗೂ 2019ರಲ್ಲಿ ಎಚ್. ಡಿ ರೇವಣ್ಣರವರು ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು. ಈ ಹೆಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಎಂದಾದರೂ ಈ ಅಪ್ಪ ಮಕ್ಕಳು ಆಡಿದ ಮಾತಿನಂತೆ ನಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿ ಅಪಹಾಸ್ಯ ಮಾಡುವ ಪೋಸ್ಟ್ ಶೇರ್ ಮಾಡಲಾಗಿದೆ.
ಸದ್ಯ ಟ್ರೋಲ್ ಮಗ ಫೇಸ್ ಬುಕ್ ಪೇಜ್ ವಿರುದ್ಧ ಜೆಡಿಎಸ್ ಘಟಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಟ್ರೋಲ್ ಮಗ ಅಡ್ಮಿನ್ ಗಾಗಿ ಹುಡುಕಾಟ ಆರಂಭಿಸಿದ್ದು, ಸದ್ಯ ಜಯಂತ್ ಎಂಬಾತನನ್ನ ವಶಕ್ಕೆ ಪಡೆದು FIR ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.