ರೈತರ ಸಾಲ ಮನ್ನಾಗೆ ಶಾಸಕರಿಂದ ಹೊಸ ಪ್ಲಾನ್

First Published Jul 4, 2018, 12:51 PM IST
Highlights

ರಾಜ್ಯದಲ್ಲಿ ಕೃಷಿ ಸಾಲ ಮನ್ನಾ ಮಾಡಲು ಸರ್ಕಾರ ಹರ ಸಾಹಸ ಪಡುತ್ತಿದೆ. ಇವಿಧ ಮೂಲಗಳಿಂದ ಸಾಲ ಮನ್ನಾ ಮಾಡುವ ಸಲುವಾಗಿ ಹಣ ಸಂಗ್ರಹ ಮಾಡುತ್ತಿದೆ. ಈ ನಿಟ್ಟಿನಲ್ಲಿ ಶಾಸಕರೆಲ್ಲರೂ ಇದೀಗ ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ. 

ಬೆಂಗಳೂರು :  ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಕುಮಾರಸ್ವಾಮಿ ಸರ್ಕಾರ, ಅದಕ್ಕಾಗಿ ಹಣ ಹೊಂದಿಸಲು ಕೈಲಾದಷ್ಟು ಸಹಾಯ ಮಾಡುವಂತೆ ಶಾಸಕರಿಗೆ ಹೇಳಿದೆ. 

ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಶಾಸಕರು ಇದಕ್ಕೊಂದು ಹೊಸ ಉಪಾಯ ಹುಡುಕಿದ್ದಾರೆ. ಶಾಸಕರು ತಮ್ಮ ಊರಿಗೆ ತೆರಳಿ ಮನೆ ಮಂದಿಯ ಹೆಸರಿನಲ್ಲಿ ಕೃಷಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಸಾಲದ ಹಣ ಬಂದ ಕೂಡಲೇ ಸಾಲ ಮನ್ನಾಕ್ಕೆ ಎಲ್ಲಾ ಹಣವನ್ನು ಸರ್ಕಾರಕ್ಕೇ ನೀಡುವುದಾಗಿ ಭರವಸೆ ನೀಡಿದ್ದಾರೆ. 

ಶಾಸಕರು ಮಾಡಿರುವ ಕೃಷಿ ಸಾಲವೇ 10 ಕೋಟಿ ರು. ಆಗಿದ್ದು, ಆ ಸಾಲವನ್ನೂ ಮನ್ನಾ ಮಾಡಬೇಕಾದ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. [ಸುಳ್ಳು ಸುದ್ದಿ]

 

click me!