[ಸುಳ್ಳು ಸುದ್ದಿ] ಕಮಲದ ಮಾರಾಟ, ಹುಲ್ಲು ಹೊರುವುದು, ಕೈ ತೋರಿಸುವುದಕ್ಕೆ ನಿಷೇಧ

By Suvarna Web DeskFirst Published Mar 29, 2018, 9:57 AM IST
Highlights

ರಾಜ್ಯ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಪ್ರಚಾರ ನೀಡುವ ಎಲ್ಲಾ ತರಹದ ಚಟುವಟಿಕೆಗಳನ್ನೂ ಚುನಾವಣಾ ಆಯೋಗ ನಿಷೇಧಿಸಿದೆ.

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಪ್ರಚಾರ ನೀಡುವ ಎಲ್ಲಾ ತರಹದ ಚಟುವಟಿಕೆಗಳನ್ನೂ ಚುನಾವಣಾ ಆಯೋಗ ನಿಷೇಧಿಸಿದೆ.

ಅದರಂತೆ, ಚುನಾವಣೆ ಮುಗಿಯುವವರೆಗೆ ಕಮಲದ ಹೂವನ್ನು ಕೆರೆಗಳಿಂದ ಕೊಯ್ಯುವುದು ಹಾಗೂ ಮಾರಾಟ ಮಾಡುವುದು ನಿಷಿದ್ಧ. ಏಕೆಂದರೆ ಕಮಲದ ಹೂವು ಬಿಜೆಪಿ ಚಿಹ್ನೆ. ಇನ್ನು, ಜನರು ತಮ್ಮ ಕೈಗಳನ್ನು ಮುಚ್ಚಿಕೊಂಡು ಓಡಾಡಬೇ ಕೆಂದು ಸೂಚಿಸಲಾಗಿದೆ.

ಏಕೆಂದರೆ ಹಸ್ತ ಕಾಂಗ್ರೆಸ್ ಚಿಹ್ನೆ. ಅದೇ ರೀತಿ, ರಾಜ್ಯದಲ್ಲಿ ಎಲ್ಲೂ ಮಹಿಳೆಯರು ಹುಲ್ಲು ಹೊರುವಂತಿಲ್ಲ. ಪುರುಷರು ಮಾತ್ರ ಹುಲ್ಲು ಹೊರಬಹುದು. ಏಕೆಂದರೆ ಹುಲ್ಲು ಹೊತ್ತ ಮಹಿಳೆ ಜೆಡಿಎಸ್ ಚಿಹ್ನೆ. ಈ ಆದೇಶವನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

click me!