
ಮುಂಬೈ: ದೇಶದಲ್ಲಿನ ಕೊಳೆತ ಆಲೂಗಡ್ಡೆಗಳನ್ನು ಸಂಗ್ರಹಿಸಿ ಅದರಿಂದ ಗ್ಯಾಸ್ ಮತ್ತು ಗೊಬ್ಬರ ತಯಾರಿಸಿ ಮಾರಾಟ ಮಾಡಲು ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಆಲೂ ಗೋಬರ್‌ಗ್ಯಾಸ್ ಕಂಪನಿಯೊಂದನ್ನು ಆರಂಭಿಸಲಿದ್ದಾರೆ.
ಈ ಕಂಪನಿಗೆ ಯಥೇಚ್ಛವಾಗಿ ಕೊಳೆತ ಆಲೂಗಡ್ಡೆ ಬೇಕಿದ್ದು ಇದನ್ನು ಜನರಿಂದಲೇ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಕನಿಷ್ಠ 1 ಕೆಜಿ ಕೊಳೆತ ಆಲೂ ಕೊಟ್ಟವರಿಗೆ ಜಿಯೋ ಕಂಪನಿ ವತಿಯಿಂದ 1 ಜಿ.ಬಿ ಡೇಟಾ ಆಫರ್ ನೀಡಿದ್ದಾರೆ.
ಮಗಳ ಮದುವೆಗೆ 700 ಕೋಟಿ ರು. ಖರ್ಚು ಮಾಡಿದವರು ಕೊಳೆತ ಆಲೂಗಡ್ಡೆ ಎಂದು ಮುಕೇಶ್ ಅಂಬಾನಿಯವರನ್ನು ಕಾಶ್ಮೀರ ರಾಜ್ಯಪಾಲರು ಟೀಕೆ ಮಾಡಿದ್ದನ್ನು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಂಡು ಅಂಬಾನಿ ಯವರು ಈ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಇಷ್ಟೇ ಅಲ್ಲದೆ ತಮ್ಮನ್ನು ಟೀಕಿಸಿ ಹೊಸ ಆಲೋಚನೆ ಮೂಡುವಂತೆ ಮಾಡಿದ ರಾಜ್ಯಪಾಲರನ್ನು ಮುಕೇಶ್ ಅಭಿನಂದಿಸಿದ್ದಾರೆ.
[ಇದು ಸುಳ್ಳು ಸುದ್ದಿಯಾಗಿದ್ದು, ಇದನ್ನು ಕೇವಲ ಮನರಂಜನೆ ದೃಷ್ಟಿಯಿಂದಷ್ಟೇ ನೀಡಲಾಗುತ್ತದೆ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.