ಚಿಕ್ಕಬಳ್ಳಾಪುರದಲ್ಲಿ ರಂಗೇರಿದ ಎಪಿಎಂಸಿ ಚುನಾವಣೆ: ತಯಾರಾಗಿದೆ ನಕಲಿ ಮತದಾರರ ಪಟ್ಟಿ!

Published : Nov 16, 2016, 02:42 AM ISTUpdated : Apr 11, 2018, 01:12 PM IST
ಚಿಕ್ಕಬಳ್ಳಾಪುರದಲ್ಲಿ ರಂಗೇರಿದ ಎಪಿಎಂಸಿ ಚುನಾವಣೆ: ತಯಾರಾಗಿದೆ ನಕಲಿ ಮತದಾರರ ಪಟ್ಟಿ!

ಸಾರಾಂಶ

ಎಪಿಎಂಸಿ ಚುನಾವಣೆ ಎಂದರೆ ಅದು ಸ್ವಂತ ಜಮೀನು ಹೊಂರುವ ರೈತರಿಗೆ ಮಾತ್ರ ಇರುವ ಹಕ್ಕು, ಆದರೆ ಇಲ್ಲಿ ಜಮೀನು ಇಲ್ಲದಿದ್ದರೂ ನಕಲಿ ಓಟರ್ ಲಿಸ್ಟ್ ತಯಾರು ಮಾಡಲಾಗಿದೆ. ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಹಲವಾರು ಕಸರತ್ತು ನಡೆಸುವುದು ಸರ್ವೇ ಸಾಮಾನ್ಯ, ಆದರೆ ಇಲ್ಲಿ  ನಕಲು ಮತದಾರರ ಪಟ್ಟೀನೆ ತಯಾರಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.  

ಚಿಕ್ಕಬಳ್ಳಾಪುರ(ನ.16): ಎಪಿಎಂಸಿ ಚುನಾವಣೆ ಎಂದರೆ ಅದು ಸ್ವಂತ ಜಮೀನು ಹೊಂರುವ ರೈತರಿಗೆ ಮಾತ್ರ ಇರುವ ಹಕ್ಕು, ಆದರೆ ಇಲ್ಲಿ ಜಮೀನು ಇಲ್ಲದಿದ್ದರೂ ನಕಲಿ ಓಟರ್ ಲಿಸ್ಟ್ ತಯಾರು ಮಾಡಲಾಗಿದೆ. ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಹಲವಾರು ಕಸರತ್ತು ನಡೆಸುವುದು ಸರ್ವೇ ಸಾಮಾನ್ಯ, ಆದರೆ ಇಲ್ಲಿ  ನಕಲು ಮತದಾರರ ಪಟ್ಟೀನೆ ತಯಾರಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.  

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಸಧ್ಯ ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೇನು ಎಪಿಎಂಸಿ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಬೇಕಿದ್ದ ಇವರೆಲ್ಲಾ ಪ್ರತಿಭಟನೆಯಲ್ಲಿ ತೊಡಗಲು ಕಾರಣ ನೂತನ ಮತದಾರರ ಪಟ್ಟಿ. ಹೌದು ಸಾಮಾನ್ಯವಾಗಿ ಎಪಿಎಂಸಿ ಚುನಾವಣೆಗೆ ಜಮೀನನ್ನು ಹೊಂದಿದ್ದು, ಪಹಣಿ ಇರಬೇಕು. ಆದರೆ ಶಿಡ್ಲಘಟ್ಟದಲ್ಲಿ ಮಾತ್ರ ಜಮೀನು ಇಲ್ಲದವರು ಕೂಡ ಮತದಾರರಾಗಿದ್ದಾರೆ.

ಸರ್ಕಾರಿ ಜಮೀನು, ನಿವೇಶನಗಳು,ಗುಂಡುತೋಪಿನಲ್ಲೂ ಇರುವ ಪಹಣಿಯಲ್ಲಿ ಬೇರೆಯವರ ಹೆಸರುಗಳನ್ನು  ಸೇರಿಸಿ ಮತದಾರ ಪಟ್ಟಿ ಸಿದ್ದಪಡಿಸಿದ್ದಾರೆ. ಸುಮಾರು 400 ಮತಗಳು ಈ ರೀತಿ ಇದ್ದು, ಇದ್ರಲ್ಲಿ  ಕಾಂಗ್ರೆಸ್ ಪಾತ್ರ ಇದೆ. ಅಧಿಕಾರಿಗಳೂ ಕೂಡ ಕಾಂಗ್ರೆಸ್ ಏಜೆಂಟ್​ಗಳ ರೀತಿ ವರ್ತಿಸ್ತಾರೆ ಅಂತ ಶಾಸಕ ಎಂ ರಾಜಣ್ಣ  ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರ ವಿರುದ್ಧ  ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ತಹಶೀಲ್ದಾರ್ ಮನೋರಮಾ , ಇವರೆಲ್ಲಾ ಕಳೆದ ಚುನಾವಣೆಯಲ್ಲೂ ಕೂಡ ಮತ ಚಲಾಯಿಸಿದ್ದರು. ಒಟ್ಟು 36 ಸಾವಿರ ಮತಗಳಿದ್ದು, ಈ ಬಾರಿ 980 ಮತಗಳನ್ನು ಹೆಚ್ಚಿಸಲಾಗಿದೆ. ಆದ್ರೆ ಇದರಲ್ಲಿ 380 ಮತಗಳು ನಕಲಿ ಎಂದು ಕಂಡು ಬಂದಿದೆ. ಈ ಸಂಬಂಧ ಇಬ್ಬರು ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ನಕಲಿ ಮತದಾರರನ್ನು ಕೂಡ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದರು.

ಒಟ್ಟಿನಲ್ಲಿ  ರೈತರಿಗಾಗಿ ನಡೆಯೋ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳ ಜಟಾಪಟಿ ಜೋರಾಗಿದ್ದು, ಈ ಪ್ರತಿಭಟನೆ ವಿಕೋಪಕ್ಕೆ ಹೋಗುವುದಾ, ಅಥವಾ ಪರಿಹಾರ ದೊರೆಯುವುದಾ ಅಂತಾ ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?