
ನವದೆಹಲಿ : ಜಗತ್ತಿನ 10 ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 2ನೇ ಸ್ಥಾನ ಪಡೆದಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮೊದಲನೇ ಸ್ಥಾನದಲ್ಲಿದ್ದರೆ, ನರೇಂದ್ರ ಮೋದಿ ಮತ್ತು ವಾಡ್ಲಿಮಿರ್ ಪುಟಿನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಫಾಕ್ಸ್ ನ್ಯೂಸ್ ಎಂಬ ಹೆಸರಿನ ವೆಬ್ ಸೈಟ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನಂತರ ಈ ಪಟ್ಟಿ ವೈರಲ್ ಆಗಿದೆ. ಆ ಪಟ್ಟಿಯ ಕೆಳಗೆ ‘ಭಾರತದ 14ನೇ ಪ್ರಧಾನಿ ಮೋದಿ ಜಗತ್ತಿನ ಅತಿ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕಪ್ಪುಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ, ಚುನಾವಣಾ ಪ್ರಚಾರಕ್ಕಾಗಿ ಸಹರಾ ಗ್ರೂಪ್‌ನ ಶ್ರೀಮಂತ ಉದ್ಯಮಿಗಳ ಬಳಿ ಹಣ ತೆಗೆದುಕೊಳ್ಳುತ್ತಿದ್ದಾರೆ.
ಆ ಹಣವನ್ನು ವಿವಿಧ ಯೋಜನೆಗಳಿಗೆ ಹೂಡಿಕೆ ಮಾಡಿ ಮತ್ತಷ್ಟು ಹಣ ಸಂಪಾದಿಸುತ್ತಿ ದ್ದಾರೆ. ಅಲ್ಲದೆ ಅತಿ ಹೆಚ್ಚು ವೇತನ ಪಡೆಯುವ ಪ್ರಥಮ ಪ್ರಧಾನಿಯೂ ಹೌದು’ ಎಂದು ಒಕ್ಕಣೆಯನ್ನೂ ಬರೆಯಲಾಗಿದೆ. ಆದರೆ ನಿಜಕ್ಕೂ ಅಮೆರಿಕದ ಸುದ್ದಿ ಸಂಸ್ಥೆ ‘ಫಾಕ್ಸ್ ನ್ಯೂಸ್’ ಭ್ರಷ್ಟ ಪ್ರಧಾನಿಗಳ ಪಟ್ಟಿಯನ್ನು ಸಿದ್ಧಪಡಿಸಿರುವುದು ನಿಜವೇ ಎಂದು ‘ಆಲ್ಟ್ ನ್ಯೂಸ್’ ತನಿಖೆಗೆ ಮುಂದಾದಾಗ ಈ ಪಟ್ಟಿಯ ಅಸಲಿ ಕತೆ ಬಯಲಾಗಿದೆ.
ಏಕೆಂದರೆ ಫಾಕ್ಸ್ ನ್ಯೂಸ್ ಈ ರೀತಿಯ ಯಾವುದೇ ಸಮೀಕ್ಷೆ ನಡೆಸಿ ಪಟ್ಟಿ ಬಿಡುಗಡೆ ಮಾಡಿಲ್ಲ. ಇದೊಂದು ನಕಲಿ ಪಟ್ಟಿ. ರಾಜಕೀಯ ದುರುದ್ದೇಶದಿಂದ ಈ ರೀತಿ ನಕಲಿ ಪಟ್ಟಿ ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.