ನೋಟಿನಲ್ಲಿ ಮತ್ತೊಂದು ಸೊನ್ನೆ ಸೇರಿಸಲು ಸರ್ಕಾರ ನಿರ್ಧಾರ?

By Web DeskFirst Published Oct 6, 2018, 2:29 PM IST
Highlights

ಸರ್ಕಾರ ಇದೀಗ ನೋಟಿನಲ್ಲಿ ಬದಲಾವಣೆಯೊಂದನ್ನು ತರಲು ನಿರ್ಧಾರ ಮಾಡಿದೆ. ಡಾಲರ್ ವಿರುದ್ಧ ರುಪಾಯಿ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದ ನೋಟಿನಲ್ಲಿ ಮತ್ತೊಂದು ಸೊನ್ನೆ ಸೇರಿಸಲು ತೀರ್ಮಾನಿಸಿದೆ. 

ಬೆಂಗಳೂರು :  ಡಾಲರ್ ವಿರುದ್ಧ ರುಪಾಯಿ ದಿನೇ ದಿನೇ ಕುಸಿತ ಕಾಣುತ್ತಿದೆ. ಇದು ಹೀಗೇ ಆದರೆ ಕೆಲ ದಿನಗಳಲ್ಲೇ ರುಪಾಯಿ ಮೌಲ್ಯ ಡಾಲರ್ ವಿರುದ್ಧ 100 ರು.  ಆಗಲಿದೆ. ಇದನ್ನು ಮನಗಂಡಿರುವ ಸರ್ಕಾರ ನೋಟುಗಳಲ್ಲಿ ಒಂದು ಸೊನ್ನೆಯನ್ನು ಹೆಚ್ಚಾಗಿ ಸೇರಿಸಲು ನಿರ್ಧರಿಸಿದೆ.

 ಅಂದರೆ, ನಿಮ್ಮ ಬಳಿ 10 ರು. ನೋಟಿದ್ದರೆ ಅದಕ್ಕೆ ಒಂದು ಸೊನ್ನೆ ಹೆಚ್ಚುವರಿಯಾಗಿ ಸೇರಿದರೆ 1000 ಆಗಲಿದೆ. 100 ರು. ಇದ್ದಿದ್ದು 1000 ರು.ಆಗಲಿದೆ. ಒಂದು ಸೊನ್ನೆ ಸೇರಿಸಿದ ಹೊಸ ನೋಟುಗ ಳನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. 

ಅಲ್ಲಿಯವರೆಗೂ ಜನರು ಮಾರ್ಕರ್ ಪೆನ್ನಿನಲ್ಲಿ ಒಂದು ಸೊನ್ನೆಯನ್ನು ತಾವೇ ಬರೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

click me!