ನಕಲಿ ಅಶ್ಲೀಲ ಸಿಡಿ ಕೇಸ್ : ಕಾರವಾರ ಕೋರ್ಟ್ ಮಹತ್ವದ ಆದೇಶ

Published : Apr 05, 2019, 10:54 PM ISTUpdated : Apr 05, 2019, 11:20 PM IST
ನಕಲಿ ಅಶ್ಲೀಲ ಸಿಡಿ ಕೇಸ್ : ಕಾರವಾರ ಕೋರ್ಟ್ ಮಹತ್ವದ ಆದೇಶ

ಸಾರಾಂಶ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮೇಲೆ ಅಪಪ್ರಚಾರ ನಡೆಸುವ ಉದ್ದೇಶದಿಂದ ತಯಾರು ಮಾಡಿದ್ದರು ಎನ್ನಲಾದ ನಕಲಿ ಸಿಡಿ ವಿಚಾರದಲ್ಲಿ ನ್ಯಾಯಾಲಯ ಮಹತ್ವದ ಆದೇಶವೊಂದನ್ನು ನೀಡಿದೆ.

ಕಾರವಾರ[ಏ. 05]  ನಕಲಿ ಅಶ್ಲೀಲ ಸಿಡಿ ತಯಾರಿಸಿ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ತೇಜೋವಧೆಯ ಹುನ್ನಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕುಮಟಾ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ರದ್ಧತಿಗೆ ಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆ ಮುಂದುವರಿಸುವಂತೆ ತಿಳಿಸಿದೆ.

2010ರಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಹೋಲುವ ವ್ಯಕ್ತಿಗೆ ಉಡುಗೆಯನ್ನು ತೊಡಿಸಿ ಶ್ರೀಗಳ ಹಾವ-ಭಾವಗಳ ಮಾಡಿ ಚಿತ್ರೀಕರಿಸಲಾಗಿತ್ತು, ಇದನ್ನುತಂತ್ರಜ್ಞಾನ ಬಳಸಿ ಶ್ರೀಗಳ ಚಿತ್ರವನ್ನು ಅಶ್ಲೀಲ ಚಿತ್ರಗಳ ಜೊತೆ ಜೋಡಿಸಿ, ಮಾರ್ಫಿಂಗ್ ಮಾಡಿದ ಚಿತ್ರಗಳನ್ನು ಬಳಸಿ ಸಿಡಿ ತಯಾರಿಸಿ ಶ್ರೀಗಳ ತೇಜೋವಧೆ ಮಾಡುವ ಪ್ರಯತ್ನ ನಡೆದಿತ್ತು. ಐಜಿಪಿ ಗೋಪಾಲ ಹೊಸುರು ನೇತೃತ್ವದ ಪೊಲೀಸ್ ತಂಡ ಪ್ರಕರಣವದ ಸತ್ಯಾಸತ್ಯತೆ ತೆರೆದಿಟ್ಟಿತ್ತು. ನಂತರ ತನಿಖೆ ನಡೆದು ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಗೋಕರ್ಣದಲ್ಲಿ ಶಿವರಾತ್ರಿ ಸಂಭ್ರಮ ಹೇಗಿತ್ತು?

ಈ ಬಗ್ಗೆ ಪ್ರತಿಕ್ರಿಸಿರುವ ಶ್ರೀ ಮಠ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಚಲ ವಿಶ್ವಾಸವನ್ನು ಹೊಂದಿದ್ದು, ದಕ್ಷ ಪೊಲೀಸ ಅಧಿಕಾರಿಗಳು ಸಾಕ್ಷಾಧಾರಗಳ ಸಹಿತವಾಗಿ ಪ್ರಕರಣವನ್ನು ತೆರೆದಿಟ್ಟಿದ್ದಾರೆ. ಷಡ್ಯಂತ್ರಗಳಿಗೆ ಮೂಲವಾದ ಈ ನಕಲಿ ಅಶ್ಲೀಲ ಸಿಡಿ ಪ್ರಕರಣದ ಸಮಗ್ರ ತನಿಖೆ ನಡೆದು ಆರೋಪಿಗಳ ಹಾಗೂ ಆರೋಪಿಗಳ ಹಿನ್ನೆಲೆಯವರಿಗೆ ನ್ಯಾಯಾಂಗ ವ್ಯವಸ್ಥೆಯ ಮೂಲಕ ಸೂಕ್ತ ಶಿಕ್ಷೆಯಾಗಲಿ, ಒಳಿತನ್ನು ಕೆಡುಕಿನಂತೆ ಬಿಂಬಿಸುವ ಹೀನ ಕಾರ್ಯ ಮಾಡುವವರು ಸರಿಯಾದ ಪಾಠ ಕಲಿಯುವಂತಾಗಲಿ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ