ಮೋದಿ ದಿನಕ್ಕೆ 18 ತಾಸು ಕಷ್ಟಪಟ್ಟು ಕೆಲಸ ಮಾಡಿ ಭಾರತದ ಶಿಕ್ಷಣ ಕ್ಷೇತ್ರವನ್ನು ಪಾಕಿಸ್ತಾನದ ಸರಿಸಮಕ್ಕೆ ತಂದು ನಿಲ್ಲಿಸಿದ್ದಾರೆ! ಎಂ ಸಂದೇಶವೊಂದು ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ನವದೆಹಲಿ[ಸೆ.27]: ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಜಗತ್ತಿನ 300 ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ 17 ವಿವಿಗಳಿದ್ದವು. ಆದರೆ, ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಜಗತ್ತಿನ ಟಾಪ್ 300 ವಿವಿಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ವಿವಿ ಸ್ಥಾನ ಪಡೆದಿಲ್ಲ. ಮೋದಿ ದಿನಕ್ಕೆ 18 ತಾಸು ಕಷ್ಟಪಟ್ಟು ಕೆಲಸ ಮಾಡಿ ಭಾರತದ ಶಿಕ್ಷಣ ಕ್ಷೇತ್ರವನ್ನು ಪಾಕಿಸ್ತಾನದ ಸರಿಸಮಕ್ಕೆ ತಂದು ನಿಲ್ಲಿಸಿದ್ದಾರೆ!
ಹೀಗೊಂದು ಸಂದೇಶ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವೀಟರ್ ಸೇರಿದಂತೆ ಬಹುತೇಕ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಸಂದೇಶವನ್ನು ಮೋದಿ ವಿರೋಧಿಗಳು ಮೋದಿ ಬೆಂಬಲಿಗರ ಕಾಲೆಳೆಯುವುದಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಈ ಸಂದೇಶದ ಪರ ಹಾಗೂ ವಿರುದ್ಧ ಸಾಕಷ್ಟು ವಾಗ್ವಾದಗಳೂ ನಡೆಯುತ್ತಿವೆ.
ವೈರಲ್ ಚೆಕ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಷ್ಟಕ್ಕೂ ಇದು ನಿಜವೋ, ಸುಳ್ಳೋ? ಈ ಬಗ್ಗೆ ದಿ ಲಾಜಿಕಲ್ ಇಂಡಿಯನ್ ಡಾಟ್ ಕಾಮ್ ಆಳಕ್ಕಿಳಿದು ಪರಿಶೀಲನೆ ನಡೆಸಿದೆ. ಅಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ, ಮೋದಿ ಸರ್ಕಾರದ ಅವಧಿಯಲ್ಲೂ ಟಾಪ್ 300 ವಿವಿಗಳ ಪಟ್ಟಿಯಲ್ಲಿ ಭಾರತದ ಕೆಲ ವಿವಿಗಳು ಸ್ಥಾನ ಪಡೆದಿವೆ ಮತ್ತು ಮನಮೋಹನ ಸಿಂಗ್ ಅವರ ಅವಧಿಯಲ್ಲಿ 17 ವಿವಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು ಎಂಬುದಕ್ಕೆ ಯಾವುದೇ ನಂಬಲರ್ಹ ಆಧಾರವಿಲ್ಲ. ಜಗತ್ತಿನಲ್ಲಿ ವಿವಿಗಳಿಗೆ ರಾರಯಂಕಿಂಗ್ ನೀಡುವ ಪ್ರತಿಷ್ಠಿತ ಸಮೀಕ್ಷೆಗಳೆಂದರೆ ‘ಟೈಮ್ಸ್ ಹೈಯರ್ ಎಜುಕೇಶನ್ ವಲ್ಡ್‌ರ್ ಯುನಿವರ್ಸಿಟಿ ರಾರಯಂಕಿಂಗ್ಸ್’ ಮತ್ತು ‘ಕ್ಯುಎಸ್ ವರ್ಲ್ಡ್ ಯುನಿವರ್ಸಿಟಿ ರಾರಯಂಕಿಂಗ್ಸ್.’ ಇವೆರಡೂ ಸಂಸ್ಥೆಗಳ ಹಳೆಯ ಮತ್ತು ಹೊಸ ರಾರಯಂಕಿಂಗ್‌ಗಳನ್ನು ಪರಿಶೀಲಿಸಿದಾಗ ಮೇಲಿನ ಪೋಸ್ಟ್ ಸುಳ್ಳೆಂದು ಸಾಬೀತಾಗಿದೆ.