
ಮುಂಬೈನ ವಿಮಾನ ನಿಲ್ದಾಣದಲ್ಲಿ ಕಂಡ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕ ಮತ್ತು ಅದರ ಪಕ್ಕದಲ್ಲಿಯೇ ಜರ್ಮನಿಯ ನಾಝಿ ನಾಯಕ ಅಡಾಲ್ಫ್ ಹಿಟ್ಲರ್ ಕುರಿತು ಇರುವ ಪುಸ್ತಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವೆರಡು ಫೋಟೋದ ಮಧ್ಯೆ ಮೋದಿ ಪುಸ್ತಕದೆಡೆಗೆ ತೋರುವ ಬಾಣದ ಗುರುತನ್ನು ನೀಡಿ ನೀವು ಇದನ್ನು ಇಷ್ಟಪಟ್ಟರೆ ಇದನ್ನೂ ಓದಿ ಎಂದು ಬಾಣದ ಗುರುತನ್ನ ಹಿಟ್ಲರ್ ಪುಸ್ತಕದತ್ತ ತೋರಲಾಗಿದೆ.
Fact Check : ನಷ್ಟದಲ್ಲಿದೆಯಾ ಎಲ್ ಐಸಿ? ವೈರಲ್ ಪೋಸ್ಟ್ ಗೆ ಸ್ಪಷ್ಟನೆ ಕೊಟ್ಟ ವಿಮಾ ಕಂಪನಿ
ಆದರೆ, ಮುಂಬೈ ವಿಮಾನ ನಿಲ್ದಾಣದಲ್ಲಿ ನಿಜಕ್ಕೂ ಮೋದಿ ಮತ್ತು ಹಿಟ್ಲರ್ ಕುರಿತ ಪುಸ್ತಕವನ್ನು ಒಟ್ಟಿಗೇ ಇಡಲಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ ಎಂದು ತಿಳಿದುಬಂದಿದೆ. ಮೋದಿ ಚಿತ್ರವಿರುವ ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಬೇರೊಂದು ಪುಸ್ತಕದ ಮೇಲೆ ಮೋದಿ ಪೋಟೋವನ್ನು ಅಂಟಿಸಿದಂತೆ ಕಾಣುತ್ತದೆ.
ಮೋದಿ ಚಿತ್ರವಿರುವ ಪುಸ್ತಕದ ಎಡಭಾಗದಲ್ಲಿ ‘ಡಿ’ ಎಂಬ ಅಕ್ಷರ ಸ್ವಲ್ಪವೇ ಕಾಣಿಸುತ್ತದೆ. ಪುಸ್ತಕ ಇಟ್ಟಿರುವ ಶೆಲ್‌್ಫ ಕೆಳಗೆ ಪುಸ್ತಕದ ಬೆಲೆ ವಿದೇಶಿ ಕರೆನ್ಸಿಯಲ್ಲಿದೆ. ಅಲ್ಲಿಗೆ ಇದು ಮುಂಬೈ ವಿಮಾನ ನಿಲ್ದಾಣದ ಚಿತ್ರ ಅಲ್ಲ ಎಂಬುದು ಸ್ಪಷ್ಟ. ಅಲ್ಲದೆ ಆಲ್ಟ್ ನ್ಯೂಸ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೂಲ ಚಿತ್ರ ಲಭ್ಯವಾಗಿದೆ.
ಅದರಲ್ಲಿ ಮೋದಿ ಮುಖಪುಟವಿರುವ ಪುಸ್ತಕದ ಬದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖಪುಟದ ಪುಸ್ತಕವಿದೆ. 2016ರ ‘ದಿ ಪೋಕ್’ ಟ್ವೀಟ್ ಪ್ರಕಾರ ಈ ಫೋಟೋ ಬುಕ್‌ಶಾಪ್‌ವೊಂದರಲ್ಲಿ ಕ್ಲಿಕ್ಕಿಸಿದ್ದಾಗಿದೆ. ಆದರೆ ಎಲ್ಲಿ, ಏನು ಎಂಬ ಮಾಹಿತಿ ಇಲ್ಲ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.