Fact Check: ನಿರುದ್ಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ರಾ ಸುಂದರ್‌ ಪಿಚ್ಬೆೃ?

Published : Aug 27, 2019, 09:22 AM IST
Fact Check: ನಿರುದ್ಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ರಾ ಸುಂದರ್‌ ಪಿಚ್ಬೆೃ?

ಸಾರಾಂಶ

ಗೂಗಲ್‌ ಸಿಇಒ ಸುಂದರ್‌ ಪಿಚ್ಬೆೃ ಭಾರತದ ನಿರುದ್ಯೋಗದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ, ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆದರೆ ಭಾರತಲ್ಲಿ ಉಂಟಾಗಿರುವ ನಿರುದ್ಯೋಗದ ಬಗ್ಗೆ ಮತ್ತು ಉದ್ಯೋಗ ಕಳೆದುಕೊಂಡ ಲಕ್ಷಾಂತರ ಯುವ ಉದ್ಯೋಗಿಗಳ ಬಗ್ಗೆ ಆತಂಕವಾಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಗೂಗಲ್‌ ಸಿಇಒ ಸುಂದರ್‌ ಪಿಚ್ಬೆೃ ಭಾರತದ ನಿರುದ್ಯೋಗದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ, ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆದರೆ ಭಾರತಲ್ಲಿ ಉಂಟಾಗಿರುವ ನಿರುದ್ಯೋಗದ ಬಗ್ಗೆ ಮತ್ತು ಉದ್ಯೋಗ ಕಳೆದುಕೊಂಡ ಲಕ್ಷಾಂತರ ಯುವ ಉದ್ಯೋಗಿಗಳ ಬಗ್ಗೆ ಆತಂಕವಾಗುತ್ತಿದೆ. ಭಾರತ ತನ್ನ ಜನರ ಆಹಾರಾಭ್ಯಾಸಕ್ಕಿಂತ ಜನರ ಕಲ್ಯಾಣದ ಬಗ್ಗೆ ಗಮನಹರಿಸಬೇಕಾಗಿದೆ. ಭಾರತದ ಭವಿಷ್ಯವು ಪ್ರಬುದ್ಧ ಜನರ ಕೈಲಿದೆ ಎಂದಿದೆ- ಸುಂದರ್‌ ಪಿಚ್ಬೆೃ, ಗೂಗಲ್‌ ಸಿಇಒ ಎಂದಿದೆ.

ಮತ್ತೊಬ್ಬ ದೇಶವಿರೋಧಿ, ಭಕ್ತರು ಈಗ ಗೂಗಲ್‌ ಅನ್ನೂ ಬಹಿಷ್ಕರಿಸುತ್ತಾರೆಯೇ ಎಂದು ಅಣಕಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ಆದರೆ ನಿಜಕ್ಕೂ ಸುಂದರ್‌ ಪಿಚ್ಬೆೃ ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂದು ಬೂಮ್‌ ಲೈವ್‌ ಸುದ್ದಿಸಂಸ್ಥೆಯು ಪರಿಶೀಲಿಸಿದಾಗ ಎರಡು ವರ್ಷ ಹಿಂದಿನ ಇದೇ ರೀತಿಯ ಹೇಳಿಕೆ ಲಭ್ಯವಾಗಿದೆ.

ಆ ಹೇಳಿಕೆಯಲ್ಲಿ ನಿರುದ್ಯೋಗ ಸಮಸ್ಯೆಯ ಜೊತೆಗೆ ಗೋಮಾಂಸ ಸೇವನೆ ಅವರವರ ಇಷ್ಟಎಂದೂ ಹೇಳಲಾಗಿದೆ. ಈ ಹೇಳಿಕೆಯಲ್ಲಿರುವ ಅಂಶಗಳನ್ನೇ ಪಡೆದು ಗೂಗಲ್‌ನಲ್ಲಿ ಪರಿಶೀಲಿಸಿದಾಗ ಈ ಬಗ್ಗೆ ಯಾವುದೇ ಮಾಧ್ಯಮಗಳಲ್ಲೂ ವರದಿಯಾಗದಿರುವುದು ಕಂಡುಬಂದೆದೆ. ಹೀಗೆ ಹಲವು ವಿಧದಲ್ಲಿ ಪರಿಶೀಲನೆ ನಡೆಸಿದ ಬಳಿಕ ಇದು ನಕಲಿ ಹೇಳಿಕೆ ಎಂಬುದು ಸ್ಪಷ್ಟವಾಗಿದೆ. ವಕ್ತಾರರೂ ಕೂಡ ಈ ಹೇಳಿಕೆಯನು ಸುಂದರ್‌ ಪಿಚ್ಬೆೃ ಅವರು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಂದರ್‌ ಪಿಚ್ಬೆೃ ಹೆಸರಿನಲ್ಲಿ ನಕಲಿ ಹೇಳಿಕೆಗಳನ್ನು ಬಿಡುಗಡೆ ಮಾಡುವುದು ಇದೇನು ಹೊಸತಲ್ಲ. ಈ ಹಿಂದೆಯೂ ಅನೇಕ ಬಾರಿ ಇಂಥ ನಕಲಿ ಹೇಳಿಕೆಗಳು ವೈರಲ್‌ ಆಗಿದ್ದವು.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ