ಐಸ್‌ಲ್ಯಾಂಡ್ ದೇಶವು ಪ್ರವಾಸಿಗರನ್ನು ಉತ್ತೇಜಿಸುವ ದೃಷ್ಟಿಯಿಂದ ತನ್ನ ದೇಶದಲ್ಲಿರುವ ಮಹಿಳೆಯರನ್ನು ವಿವಾಹವಾಗಲು ತಿಂಗಳಿಗೆ 5000 ಡಾಲರ್ ಹಣ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಐಸ್‌ಲ್ಯಾಂಡ್ ದೇಶವು ಪ್ರವಾಸಿಗರನ್ನು ಉತ್ತೇಜಿಸುವ ದೃಷ್ಟಿಯಿಂದ ತನ್ನ ದೇಶದಲ್ಲಿರುವ ಮಹಿಳೆಯರನ್ನು ವಿವಾಹವಾಗಲು ತಿಂಗಳಿಗೆ 5000 ಡಾಲರ್ ಹಣ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಫುಂಕು ಯು’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ‘ಟೇಲ್ಸ್ ಕಾರ್ಟ್’ ವೆಬ್‌ಸೈಟಿನ ಈ ಕುರಿತ ಲೇಖನವನ್ನು ಶೇರ್ ಮಾಡಿ, ‘ಸ್ವರ್ಗವೇ ಕೈ ಬೀಸಿ ಕರೆಯುತ್ತಿದೆ’ ಎಂದು ಒಕ್ಕಣೆ ಬರೆಲಾಗಿದೆ. ಲೇಖನದ ಶೀರ್ಷಿಕೆಯಲ್ಲಿ ‘ಐಸ್‌ಲ್ಯಾಂಡ್ ತನ್ನ ದೇಶದ ಹೆಣ್ಣು ಮಕ್ಕಳನ್ನು ವಿದೇಶಿಗರು ವಿವಾಹವಾಗಲು ಹಣ ನೀಡಿ ಪ್ರೋತ್ಸಾಹಿಸುತ್ತಿದೆ- ಏಕೆ ಗೊತ್ತಾ?’ ಎಂದಿದೆ.
ಸದ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫುಂಕ್ ಯು ಪೋಸ್ಟ್ ಮಾಡಿದ್ದ ಸುದ್ದಿಯು 330 ಬಾರಿ ಶೇರ್ ಆಗಿದೆ. ಅದರಲ್ಲಿ ಹೆಚ್ಚು ಜನರು ‘ಈ ಬಗ್ಗೆ ಮಾಹಿತಿ ನೀಡುವಂತೆ ಕಾಮೆಂಟ್ ಮಾಡಿದ್ದಾರೆ.
ಆದರೆ ಈ ಸುದ್ದಿ ನಿಜವೇ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. 2016ರಿಂದಲೂ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ಅಲ್ಲಿಗೆ ಐಸ್‌ಲ್ಯಾಂಡ್ ತನ್ನ ದೇಶದ ಮಹಿಳೆಯರನ್ನು ವಿವಾಹವಾಗಲು ವಿದೇಶಿಗರಿಗೆ ಹಣ ನೀಡುತ್ತಿದೆ ಎಂಬ ಸುದ್ದಿ ಸುಳ್ಳು.