ಡೋಮಿನೋಸ್‌ ಮೆಸೇಜ್‌ ಶೇರ್‌ ಮಾಡಿ, ಪಿಜ್ಜಾ ಪಡೆಯಿರಿ!

Published : Aug 26, 2019, 09:48 AM IST
ಡೋಮಿನೋಸ್‌ ಮೆಸೇಜ್‌ ಶೇರ್‌ ಮಾಡಿ, ಪಿಜ್ಜಾ ಪಡೆಯಿರಿ!

ಸಾರಾಂಶ

ಡೋಮಿನೋಸ್‌ ಪಿಜ್ಜಾ ತನ್ನ 50ನೇ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರಿಗೆ ಬಂಪರ್‌ ಆಫರ್‌ ನೀಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಡೋಮಿನೋಸ್‌ ಪಿಜ್ಜಾ ತನ್ನ 50ನೇ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರಿಗೆ ಬಂಪರ್‌ ಆಫರ್‌ ನೀಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡೋಮಿನೋಸ್‌ ಹೆಸರಿನ ಫೇಸ್‌ಬುಕ್‌ ಪೇಜ್‌, ‘ಡೋಮಿನೋಸ್‌ಗೆ ಸದ್ಯ 50 ವರ್ಷ!

ಈ ಸಂದೇಶವನ್ನು ನಾಳೆ ಸಂಜೆ 7ರ ಒಳಗೆ ಶೇರ್‌ ಮಾಡಿದಲ್ಲಿ ದೊಡ್ಡ ಗಾತ್ರದ ಪಿಜ್ಜಾ ಪಡೆಯಲು 2 ಕೂಪನ್‌ ನೀಡಲಾಗುವುದು-ಡೋಮಿನೋಸ್‌.( 24ಗಂಟೆಯೊಳಗೆ ಇದನ್ನು ಶೇರ್‌ ಮಾಡಿ, ಕೂಪನನ್ನು ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಕಳಿಸಲಾಗುವುದು)’ ಎಂದು ಬರೆದು ಪೋಸ್ಟ್‌ ಮಾಡಿದೆ. ಇದು 6300ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. ನೆಟ್ಟಿಗರು, ಕಾಮೆಂಟ್‌ನಲ್ಲಿ ಡೋಮಿನೋಸ್‌ಗೆ ಬರ್ತಡೇ ವಿಶ್‌ ಕೂಡ ಮಾಡಿದ್ದಾರೆ.

ಆದರೆ ನಿಜಕ್ಕೂ ಡೊಮಿನೋಸ ತನ್ನ ಗ್ರಾಹಕರಿಗೆ ಇಂಥದ್ದೊಂದು ಆಫರ್‌ ನೀಡಿದೆಯೇ ಎಂದು ಇಂಡಿಯಾ ಟುಡೇ ಫ್ಯಾಕ್ಟ್ಚೆಕ್‌ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಡೋಮಿನೋಸ್‌ ಪಿಜ್ಜಾ ಸಂಸ್ಥೆಯು ಅಮೆರಿಕದಲ್ಲಿ 1960ರಲ್ಲಿ ಅಸ್ತಿತ್ವಕ್ಕೆ ಬಂತು. ಅಲ್ಲಿಗೆ ಸಂಸ್ಥೆ ಸ್ಥಾಪನೆಯಾಗಿ 50 ವರ್ಷ ಎಂಬುದು ಸುಳ್ಳು. ಅಲ್ಲದೆ ಈ ಸಂದೇಶವನ್ನು ಪೋಸ್ಟ್‌ ಮಾಡಿರುವ ಪೇಜ್‌ ಡೋಮಿನೋಸ್‌ನ ಅಧಿಕೃತ ಫೇಸ್‌ಬುಕ್‌ ಪೇಜ್‌ ಅಲ್ಲ.

ನಕಲಿ ಸುದ್ದಿ ಹರಡಲೆಂದೇ ಇತ್ತೀಚೆಗೆ ಈ ಪೇಜ್‌ ಸೃಷ್ಟಿಸಲಾಗಿದೆ. ಡೋಮಿನೋಸ್‌ನ ಅಧಿಕೃತ ಪುಟದಲ್ಲಿ ಪರಿಶೀಲಿಸಿದಾಗ ಈ ರೀತಿಯ ಯಾವುದೇ ಆಫರ್‌ಗಳೂ ಕಂಡುಬಂದಿಲ್ಲ. ಸಾಮಾನ್ಯವಾಗಿ ಇಂಥ ಯಾವುದೇ ಆಫರ್‌ ನೀಡಿದಲ್ಲಿ ಡೋಮಿನೋಸ್‌ ತನ್ನ ಅಧಿಕೃತ ಟ್ವೀಟರ್‌ ಮತ್ತು ಫೇಸ್‌ಬುಕ್‌ ಅದನ್ನು ಪುಟದಲ್ಲಿ ಉಲ್ಲೇಖಿಸುತ್ತದೆ. ಜೊತೆಗೆ ಡೋಮಿನೋಸ್‌ ಕಸ್ಟಮರ್‌ ಕೇರ್‌ ಕೂಡ ಈ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. 

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!