Fact Check: ಮೋದಿ ಉದ್ಘಾಟಿಸಿದ ಸೇತುವೆ 3 ತಿಂಗಳಲ್ಲಿ ಕುಸಿದು ಬಿತ್ತಾ?

By Web DeskFirst Published Jun 26, 2019, 8:50 AM IST
Highlights

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಸೇತುವೆಯೊಂದು ಮೂರೇ ಮೂರು ತಿಂಗಳಲ್ಲಿ ಮುರಿದು ಬಿದ್ದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಸೇತುವೆಯೊಂದು ಮೂರೇ ಮೂರು ತಿಂಗಳಲ್ಲಿ ಮುರಿದು ಬಿದ್ದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕುಸಿದು ಬಿದ್ದಿರುವ ಸೇತುವೆಯ ಫೋಟೋವೊಂದನ್ನು ಪೋಸ್ಟ್ ಮಾಡಿ, ‘ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಯೋಜನೆ ರೂಪಿಸಿದ್ದರು, ಪ್ರಧಾನಿಯಾದಾಗ ಉದ್ಘಾಟನೆ ಮಾಡಿದರು. ಇದಾದ ಮೂರೇ ಮೂರು ತಿಂಗಳಲ್ಲಿ ಜಮ್ನಾನಗರ್ -ಜುನಾಗಢ್ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಸೇತುವೆ ಮುರಿದು ಬಿದ್ದಿದೆ’ ಎಂದು ಒಕ್ಕಣೆ ಬರೆಯಲಾಗಿದೆ.

ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ಅಧಿಕೃತ ಟ್ವೀಟರ್ ಮೊದಲಿಗೆ ಇದನ್ನು ಪೋಸ್ಟ್ ಮಾಡಿದ್ದು, 300 ಕ್ಕೂ ಅಧಿಕ ಬಾರಿ ರಿಟ್ವೀಟ್ ಆಗಿದೆ. 1000 ಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ.  ಆದರೆ ನಿಜಕ್ಕೂ ರಾಜ್‌ಕೋಟ್ ಜಲ್ಲೆಯ ಜಮ್ನಾನಗರ್ -ಜುನಾಗಢ್ ಹೆದ್ದಾರಿ ಸೇತುವೆ ಮುರಿದು ಬಿದ್ದಿದೆಯೇ ಎಂದು ಪರಿಶೀಲಿಸಿದಾಗ ವೈರಲ್ ಆಗಿರುವ ಫೋಟೋವೊಂದು ಗುಜರಾತಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಕಂಡುಬಂದಿದೆ.

ಜೊತೆಗೆ ಆಲ್ಟ್‌ನ್ಯೂಸ್ ಸ್ಯಾಟದಡ್ ಗ್ರಾಮದ ಸರ್‌ಪಂಚ್ ಅವರ ಬಳಿ ಸ್ಪಷ್ಟನೆ ಪಡೆದಿದ್ದು ಅವರು, ‘ಈ ಸೇತುವೆಯು 50 ವರ್ಷ ಹಳೆಯದಾಗಿದ್ದು, ಮೋದಿ ಇದನ್ನು ಉದ್ಘಾಟಿಸಿಲ್ಲ’ ಎಂದಿದ್ದಾರೆ. ಜೊತೆಗೆ  ರಾಜ್‌ಕೋಟ್ ಜಿಲ್ಲೆಯ ಕಾರ‌್ಯನಿರ್ವಾಹಕ ಇಂಜಿನಿಯರ್ ಜಿ.ವಿ ಜೋಶಿ ಅವರ ಬಳಿಯೂ ಸ್ಪಷ್ಟನೆ ಪಡೆದಿದ್ದು ಅವರೂ ಕೂಡ, ‘ಇದೊಂದು ಸುಳ್ಳುಸುದ್ದಿ.

ಸೇತುವೆಯು ಕನಿಷ್ಠ 45 ವರ್ಷ ಹಳೆಯದ್ದು. ಅಲ್ಲದೆ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿಯೇ ಇಲ್ಲ ಎಂದಿದ್ದಾರೆ.

- ವೈರಲ್ ಚೆಕ್ 

click me!