ಮಸೀದಿ ದಾಳಿಯ 15 ಲಕ್ಷ ವಿಡಿಯೋ ಅಳಿಸಿದ ಫೇಸ್‌ಬುಕ್‌

Published : Mar 19, 2019, 12:09 PM IST
ಮಸೀದಿ ದಾಳಿಯ 15 ಲಕ್ಷ  ವಿಡಿಯೋ ಅಳಿಸಿದ ಫೇಸ್‌ಬುಕ್‌

ಸಾರಾಂಶ

ನ್ಯೂಜಿಲೆಂಡ್‌ನ ಮಸೀದಿ ಮೇಲಿನ ದಾಳಿ ವಿಡಿಯೋದಿಂದ ಫೇಸ್‌ಬುಕ್‌ಗೆ ಸಂಕಷ್ಟ | ಫೇಸ್‌ಬುಕ್ ವಿರುದ್ಧ  ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ | ಕೂಡಲೇ ವಿಡಿಯೋ ಡಿಲೀಟ್ ಮಾಡಿದ ಫೇಸ್‌ಬುಕ್  

ಬೆಂಗಳೂರು (ಮಾ. 19): ನ್ಯೂಜಿಲೆಂಡ್‌ನ ಮಸೀದಿ ಮೇಲಿನ ದಾಳಿ ನಡೆಸಿ 50 ಜನರನ್ನು ಕೊಂದ ಉಗ್ರ, ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿದ ಸಂಗತಿ ಇದೀಗ ಫೇಸ್‌ಬುಕ್‌ಗೇ ಭಾರೀ ಸಂಕಷ್ಟ ತಂದಿಟ್ಟಿದೆ.

ಇಂಥ ಅನಾಹುತಕಾರಿ ಘಟನೆಯನ್ನು ನೇರಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಆನ್‌ಲೈನ್‌ ಸಾಮಾಜಿಕ ಜಾಲತಾಣದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ನ್ಯೂಜಿಲೆಂಡ್‌ ಸರ್ಕಾರ ಕೂಡಾ ಈ ಬಗ್ಗೆ ಅಮೆರಿಕ ಮೂಲದ ಕಂಪನಿಯಿಂದ ಸ್ಪಷ್ಟನೆ ಕೋರಿದೆ.

ಅದರ ಬೆನ್ನಲ್ಲೇ, ವಿಶ್ವದಾದ್ಯಂತ ವೈರಲ್‌ ಆಗಿದ್ದ ಉಗ್ರ ದಾಳಿಯ 15 ಲಕ್ಷ ವಿಡಿಯೋಗಳನ್ನು ಅಳಿಸಿಹಾಕಿರುವುದಾಗಿ ಫೇಸ್‌ಬುಕ್‌ ಹೇಳಿದೆ. ‘ರಿಯಲ್‌ ಟೈಂ ಟೆರರ್‌’ ಎಂಬ ಹೆಸರಿನಲ್ಲಿ ಅಪ್‌ಲೋಡ್‌ ಆಗಿದ್ದು ಈ ವಿಡಿಯೋವನ್ನು ಗಮನಕ್ಕೆ ಬಂದ ತಕ್ಷಣ ತಡೆಹಿಡಿದು ಕಿತ್ತು ಹಾಕಲಾಗಿದೆ. ಅಲ್ಲದೇ ಅಪ್‌ಲೋಡ್‌ ಮಾಡಿದ ವ್ಯಕ್ತಿಯ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಫೇಸ್‌ಬುಕ್‌ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರಾವಳಿಗೆ ಸೂಕ್ತ ಭತ್ತದ ತಳಿ ತಲಾಶ್‌ ಮಾಡುತ್ತಿರುವ ಕೆವಿಕೆ! 10 ಅಪರೂಪದ ಔಷಧೀಯ ಭತ್ತದ ತಳಿಗಳ ವೈಜ್ಞಾನಿಕ ಪರೀಕ್ಷೆ
Mandya ARAI: ಮುದ್ದನಘಟ್ಟ-ಹೆಗ್ಗಡತಿಹಳ್ಳಿ 105 ಎಕರೆ ಭೂಮಿ ವಿವಾದ: ಗೋಮಾಳವಲ್ಲ