ಕಣಿವೆಯಲ್ಲಿ ಮತ್ತೊಂದು ಬ್ಲಾಸ್ಟ್: ಬಸ್ ನಲ್ಲಿ ಚೀನೀ ಗ್ರೆನೇಡ್ ಸ್ಫೋಟ

By Web DeskFirst Published Mar 7, 2019, 12:31 PM IST
Highlights

ಜಮ್ಮು ಕಾಶ್ಮೀರದ ಬಸ್ ನಲ್ಲಿ ಸ್ಫೋಟ|ಗಾಯಾಳುಗಳ ಸಂಖ್ಯೆ 26ಕ್ಕೇರಿಕೆ, ಐವರ ಸ್ಥಿತಿ ಗಂಭೀರ| ಜಮ್ಮುವಿನಿಂದ ದೆಹಲಿಗೆ ಹೊರಟಿದ್ದ ಬಸ್ ನಲ್ಲಿ ಸ್ಫೋಟ

ಶ್ರೀನಗರ[ಮಾ.07]: ಕಣಿವೆ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಬ್ಲಾಸ್ಟ್ ಸಂಭವಿಸಿದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ನಲ್ಲಿ ಈ ಬಾಂಬ್ ಸಿಡಿದಿದ್ದು, ಹಲವರಿಗೆ ಗಾಯಗಳಾಗಿವೆ. ಸ್ಫೋಟದ ಹಿಂದಿನ ಕಾರಣವೇನು ಎಂಬುವುದು ಈವರೆಗೂ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಪೋಟದಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

J&K: Blast at Jammu bus stand. Injured admitted to hospital. Area has been cordoned off by security personnel pic.twitter.com/utO7RX0GOp

— ANI (@ANI)

ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ನನ್ನು ಶ್ರೀನಗರದಿಂದ ಜಮ್ಮುವಿಗೆ ಸ್ಥಳಾಂತರಿಸಿದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿದೆ ಎನ್ನುವುದು ಗಮನಾರ್ಹ. ಸ್ಫೋಟದ ಹಿನ್ನೆಲೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ  ಪಡೆದಿದ್ದಾರೆ. ಘಟನಾ ಸ್ಥಳವನ್ನು ಪೊಲೀಸರು ಹಾಗೂ ಭದ್ರತಾ ಪಡೆ ಸುತ್ತುವರೆದಿದ್ದು, ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸುತ್ತಿದೆ. 

click me!