ಬಹುನಿರೀಕ್ಷಿತ ಬಜೆಟ್ 2017: ರೈತರ ನಿರೀಕ್ಷಿಗಳೇನು? ಏನೇನು ಸಿಗಬಹುದು?

Published : Feb 01, 2017, 02:05 AM ISTUpdated : Apr 11, 2018, 12:58 PM IST
ಬಹುನಿರೀಕ್ಷಿತ ಬಜೆಟ್ 2017: ರೈತರ ನಿರೀಕ್ಷಿಗಳೇನು? ಏನೇನು ಸಿಗಬಹುದು?

ಸಾರಾಂಶ

ಇಂದು ಮಂಡನೆಯಾಗುತ್ತಿರುವ ಐತಿಹಾಸಿಕ ಬಜೆಟ್​'ನಲ್ಲಿ ಕೃಷಿಕರ ನಿರೀಕ್ಷೆ ಬಹಳ ಹೆಚ್ಚು. ರೈತರು ಎದುರಿಸುತ್ತಿರುವ ಸಮಸ್ಯೆಗಳು, ವ್ಯವಸ್ಥೆಯೇ ಇಲ್ಲದ ಸ್ಥಿತಿಯಲ್ಲಿ ಬಜೆಟ್'​ನಲ್ಲಿ ಎಷ್ಟೇ ಕೋಟಿ ಕೋಟಿ ಘೋಷಣೆಯಾದರೂ, ಅದು ರೈತರನ್ನು ತಲುಪುತ್ತಲೇ ಇಲ್ಲ. ಆದರೆ, ನೋಟ್​ಬ್ಯಾನ್​ ನಂತರದ ಈ ಬಜೆಟ್​ನಲ್ಲಿ ರೈತರ ನಿರೀಕ್ಷೆಗಳು ಕಡಿಮೆಯೇನೂ ಇಲ್ಲ.

ನವದೆಹಲಿ(ಫೆ.01): ಇಂದು ಮಂಡನೆಯಾಗುತ್ತಿರುವ ಐತಿಹಾಸಿಕ ಬಜೆಟ್​'ನಲ್ಲಿ ಕೃಷಿಕರ ನಿರೀಕ್ಷೆ ಬಹಳ ಹೆಚ್ಚು. ರೈತರು ಎದುರಿಸುತ್ತಿರುವ ಸಮಸ್ಯೆಗಳು, ವ್ಯವಸ್ಥೆಯೇ ಇಲ್ಲದ ಸ್ಥಿತಿಯಲ್ಲಿ ಬಜೆಟ್'​ನಲ್ಲಿ ಎಷ್ಟೇ ಕೋಟಿ ಕೋಟಿ ಘೋಷಣೆಯಾದರೂ, ಅದು ರೈತರನ್ನು ತಲುಪುತ್ತಲೇ ಇಲ್ಲ. ಆದರೆ, ನೋಟ್​ಬ್ಯಾನ್​ ನಂತರದ ಈ ಬಜೆಟ್​ನಲ್ಲಿ ರೈತರ ನಿರೀಕ್ಷೆಗಳು ಕಡಿಮೆಯೇನೂ ಇಲ್ಲ.

ಭಾರತದ ಆರ್ಥಿಕ ಬೆನ್ನೆಲುಬೇ ಕೃಷಿ. ಕೃಷಿಯನ್ನು ಹೊರತುಪಡಿಸಿ ದೇಶ ಇಲ್ಲ. ಆದರೆ, ಇಡೀ ದೇಶದಲ್ಲಿ ಅತಿ ಹೆಚ್ಚು ತೊಂದರೆಯಲ್ಲಿರುವ, ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರ ಏನಾದರೂ ಇದೆ ಎಂದಾದರೆ, ಅದು ಕೃಷಿ ಕ್ಷೇತ್ರ. ಭಾರತದಲ್ಲಿ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಈ ಸಾವಿಗೆ, ಆತ್ಮಹತ್ಯೆಗೆ ಮೂಲ ಕಾರಣ. ಸಾಲ ಮತ್ತು ರೈತರ ಬೆಳೆಗೆ ಸೂಕ್ತ ಬೆಲೆ ಸಿಕ್ಕದೇ ಇರುವುದು ಮಾತ್ರ. ಹೀಗಾಗಿಯೇ ಕೃಷಿ ಕ್ಷೇತ್ರದ ಆತಂಕ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಹಲವು ಆತಂಕಗಳ ನಡುವೆಯೂ ಈ ವರ್ಷ ಕೃಷಿ ಕ್ಷೇತ್ರ ಉತ್ತಮ ಪ್ರಗತಿ ದಾಖಲಿಸಿರುವುದು ಆಶಾದಾಯಕ ಬೆಳವಣಿಗೆ.

ಶೇ. 4.1ರ ಬೆಳವಣಿಗೆ ಕಾಣಲಿದೆ ಎನ್ನುವುದು ನಿರೀಕ್ಷೆ. ಇದು ಕಳೆದ ವರ್ಷಕ್ಕಿಂತ ಶೇ.12ರಷ್ಟು ಹೆಚ್ಚು. ಹೀಗಿದ್ದರೂ, ಸಕ್ಕರೆ, ಹಾಲು, ಆಲೂಗಡ್ಡೆ, ಈರುಳ್ಳಿ ಪೂರೈಕೆ ಮೇಲೆ ನೋಟ್​ಬ್ಯಾನ್ ಎಫೆಕ್ಟ್ ಬಿದ್ದಿದೆ.


-ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿಯ ಪ್ರಮಾಣ ಕುಸಿಯುತ್ತಿದೆ

-ಕೃಷಿಕರು ಕೃಷಿಯಿಂದ ವಿಮುಖರಾಗುತ್ತಲೇ ಇದ್ದಾರೆ

-ಕೃಷಿ ಕ್ಷೇತ್ರದ ಕೊಡುಗೆಗೆ ತಕ್ಕಂತೆ, ಸೌಲಭ್ಯಗಳನ್ನು ಒದಗಿಸಿಲ್ಲ

-ಅತಿ ದೊಡ್ಡ ಕ್ಷೇತ್ರವಾದರೂ, ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಕ್ಷೇತ್ರ

-ಕೃಷಿಕರು ಫಸಲಿಗೆ ಸೂಕ್ತ ಬೆಲೆ ದೊರಕಿಸುವ ವ್ಯವಸ್ಥೆಯೇ ಇಲ್ಲ

-ರೈತರ ಆತ್ಮಹತ್ಯೆ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ

ಇಂಥಹ ಸಮಸ್ಯೆಗಳಿಂದಾಗಿ ಜಗತ್ತಿನಲ್ಲಿ ಅತಿ ದೊಡ್ಡ ಕೃಷಿ ಆಧಾರಿತ ರಾಷ್ಟ್ರವಾಗಿದ್ದರೂ, ಭಾರತ ಬೇಳೆ ಕಾಳು, ಎಣ್ಣೆ ಇತ್ಯಾದಿಗೆ ಬೇರೆ ದೇಶಗಳನ್ನು ಅವಲಂಬಿಸಿದೆ. ರೈತರ ಯಾವುದೇ ಬೆಳೆಗಳಿಗೆ ಇಷ್ಟೇ ಬೆಲೆ ಎನ್ನುವುದು ಇಲ್ಲವೇ ಇಲ್ಲ. ರೈತರ ಸಮಸ್ಯೆಗಳು ತುಂಬಾ ದೊಡ್ಡವೇನೂ ಅಲ್ಲ. ಬ್ಯಾಂಕುಗಳಲ್ಲಿ ರೈತರಿಗೆ ಸೂಕ್ತ ಸಾಲ ಸಿಕ್ಕಲ್ಲ. ಕೂಲಿ ಕಾರ್ಮಿಕರ ಕೊರತೆ ಬಗೆಹರಿದಿಲ್ಲ. ಮಾರುಕಟ್ಟೆಯ ಕೊರತೆ ನೀಗಿಲ್ಲ.

-ಕೃಷಿ ಸಾಲ ಮನ್ನಾ ಮಾಡಬೇಕು

-ಫಸಲಿಗೆ ಮಾರುಕಟ್ಟೆ ಸಂಗ್ರಹಣೆ ಮತ್ತು ಬೆಲೆ ವ್ಯವಸ್ಥೆ

-ಒಣ ಕೃಷಿ ಭೂಮಿಗೆ ನೀರಾವರಿ ಯೋಜನೆಗಳ ಬೇಡಿಕೆ

ಬೆಳೆ ವಿಮೆ ಯೋಜನೆ ಜಾರಿಗೆ ಆಗ್ರಹ

-ಕೃಷಿ ಸಾಲ ಬಡ್ಡಿ ದರ ಶೇ. 2ಕ್ಕೆ ಇಳಿಯುವ ಸಾಧ್ಯತೆ

-9 ಲಕ್ಷ ರೂ.ವರೆಗಿನ ಕೃಷಿ ಶೇ. 2ರಷ್ಟು ಬಡ್ಡಿ

-ಕೃಷಿ ಕ್ಷೇತ್ರಕ್ಕೆ ಮೀಸಲಾದ ಸ್ಮಾರ್ಟ್ ಆ್ಯಪ್'ಗಳಿಗೆ ಉತ್ತೇಜನ

-Rupay ಕಾರ್ಡ್'ಗಳಲ್ಲಿ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಸಾಲ

-ಕೃಷಿ ಆಧಾರಿತ ಕೈಗಾರಿಕೆಗಳಿಗೆ ತೆರಿಗೆ ಸಬ್ಸಿಡಿ ಹೆಚ್ಚಳ

-ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಸಾಲ

-ಕೃಷಿ ಸಬ್ಸಿಡಿ ಹಣ ರೈತರ ಖಾತೆಗೆ ನೇರ ವರ್ಗಾವಣೆ

-ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸಾಧ್ಯತೆ

-ಹನಿ ನೀರಾವರಿಗೆ ಸಬ್ಸಿಡಿ ಸಾಲ ಹೆಚ್ಚಳ ಸಾಧ್ಯತೆ

ಇಷ್ಟು ಸಮಸ್ಯೆಗಳು ತೀರಿಬಿಟ್ಟರೆ, ರೈತರ ಬದುಕು ಹಸನಾದೀತು. ಆದರೆ, ರೈತರ ಸಮಸ್ಯೆ ನಿವಾರಣೆಗೆ ಇಷ್ಟು ವರ್ಷಗಳಲ್ಲಿ ಒಂದು ವ್ಯವಸ್ಥೆಯೇ ಸಿದ್ಧವಾಗಿಲ್ಲ ಎನ್ನುವುದೇ ದೊಡ್ಡ ಸಮಸ್ಯೆ. ಆ ವ್ಯವಸ್ಥೆಯನ್ನು ರೂಪಿಸುವ ಯೋಜನೆಯೇನಾದರೂ ಜಾರಿಗೆ ಬಂದರೆ, ರೈತರ ಬದುಕು ಹಸನಾದೀತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!