
ಬೆಂಗಳೂರು[ಡಿ.27] ಹೊಸ ವರ್ಷಕ್ಕೆ ಕರ್ನಾಟಕದ ಜನರಿಗೆ ಸಾರಿಗೆ ಇಲಾಖೆ ದರ ಏರಿಕೆ ಶಾಕ್ ನೀಡಲಿದೆಯೇ? ದರ ಏರಿಕೆ ಕುರಿತು ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ. ಡಿಸೆಲ್ ದರ 53 ರೂ. ಇದ್ದಾಗ ನಿಗದಿ ಮಾಡಿದ್ದ ದರವೇ ಈಗಲೂ ಇದೆ. ಹಾಗಾಗಿ ಶೇ. 18 ರಷ್ಟು ಬಸ್ ದರ ಏರಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ.
ಅಲ್ಲದೇ ಒತ್ತಡ ಕಡಿಮೆ ಮಾಡಲು ಬಿಎಂಟಿಸಿಗೆ ಒಂದುವರೆ ಸಾವಿರ ಬಸ್ ಖರೀದಿ ಮಾಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ. 1500 ಬಸ್ ಗಳನ್ನು ಲೀಸ್ ಮೇಲೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ.
ಬಿಎಂಟಿಸಿ ಗೆ ಒಟ್ಟು ಮೂರು ಸಾವಿರ ಹೊಸ ಬಸ್ ನೀಡಲು ನಿರ್ಧಾರ ಮಾಡಲಾಗಿದೆ. ವಾಯವ್ಯ ಕರ್ನಾಟಕ ಸಾರಿಗೆಗೆ 313 ಬಸ್ ಖರೀದಿಸಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ ಎಂದು ತಮ್ಮಣ್ಣ ತಿಳಿಸಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ವಸೂಲಿ ಹೆಚ್ಚಿದೆ ಎಂಬ ಆರೋಪದ ಬಗ್ಗೆಯೂ ಮಾತನಾಡಿದ ತಮ್ಮಣ್ಣ, ಚೆಕ್ ಪೋಸ್ಟ್ ಗಳನ್ನ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ. ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸುತ್ತೇವೆ. ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಂದು ವ್ಯವಹಾರ ರೆಕಾರ್ಡಿಂಗ್ ಮಾಡಿಯೇ ಇಡುತ್ತೇವೆ. ಪಾರ್ಕಿಂಗ್ ಸಮಸ್ಯೆ ಬಗ್ಗೆ ಮೊದಲು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕಿದೆ. ಒಂದು ವರ್ಷದ ಬಳಿಕ ಹಂತ ಹಂತವಾಗಿ ಕಾನೂನು ಜಾರಿಗೆ ತಂದು ಬಳಿಕ ಪಾರ್ಕಿಂಗ್ ವ್ಯವಸ್ಥೆ ಇದ್ದವರಿಗೆ ಕಾರು ಖರಿದಿಸಲು ಪರವಾನಿಗೆ ಬಗ್ಗೆ ಸ್ಪಷ್ಟ ಕಾನೂನು ತರುತ್ತೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.