ರೈತರ ಸಾಲ ಮನ್ನಾ ಭರವಸೆ : ಆರ್’ಬಿಐ ಗವರ್ನರ್ ಪತ್ರ

By Suvarna Web DeskFirst Published Jan 6, 2018, 8:38 AM IST
Highlights

ರೈತರ ಸಾಲಮನ್ನಾ ಮಾಡಲಾಗುವುದು ಎಂದು ಚುನಾವಣೆ ವೇಳೆ ಭರವಸೆ ನೀಡಿದರೆ ಸಾಲ ಕಟ್ಟುವ ಸಾಮರ್ಥ್ಯ ಇರುವ ರೈತರು ಕೂಡ ಸಾಲ ಮರುಪಾವತಿ ನಿಲ್ಲಿಸುವ ಭೀತಿ ಇದೆ ಎಂದು ಹಿಂದಿನ ಆರ್‌ಬಿಐ ಗವರ್ನರ್ ಒಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು ಎಂದು ಲೋಕಸಭೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ (ಜ.06): ರೈತರ ಸಾಲಮನ್ನಾ ಮಾಡಲಾಗುವುದು ಎಂದು ಚುನಾವಣೆ ವೇಳೆ ಭರವಸೆ ನೀಡಿದರೆ ಸಾಲ ಕಟ್ಟುವ ಸಾಮರ್ಥ್ಯ ಇರುವ ರೈತರು ಕೂಡ ಸಾಲ ಮರುಪಾವತಿ ನಿಲ್ಲಿಸುವ ಭೀತಿ ಇದೆ ಎಂದು ಹಿಂದಿನ ಆರ್‌ಬಿಐ ಗವರ್ನರ್ ಒಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು ಎಂದು ಲೋಕಸಭೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸದಸ್ಯರೊಬ್ಬರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಜೇಟ್ಲಿ, ‘ರೈತರ ಸಾಲ ಮನ್ನಾ ಭರವಸೆಯನ್ನು ಚುನಾವಣೆ ವೇಳೆ ರಾಜಕೀಯ ಪಕ್ಷಗಳು ನೀಡಿದರೆ ಅಪಾಯವಿದೆ.

ಇದರಿಂದ ಬ್ಯಾಂಕಿಂಗ್ ವಲಯಕ್ಕೆ ಹೊಡೆತ ಬೀಳಲಿದೆ. ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿದದವರೂ, ಸಾಲ ಮನ್ನಾ ಮಾಡಬಹುದು ಎಂಬ ನಿರೀಕ್ಷೆಯಿಂದ ಸಾಲ ಮರುಪಾವತಿಸದೇ ಸುಮ್ಮನಾಗುತ್ತಾರೆ ಎಂದು ಗವರ್ನರ್ ಪತ್ರ ಬರೆದಿದ್ದರು’ ಎಂದು ತಿಳಿಸಿದ್ದಾರೆ.

click me!