ಮಹೇಶ್‌ರಿಂದಲೇ ರಾಜೀನಾಮೆ ಅಸಲಿ ಕಾರಣ ಬಹಿರಂಗ

By Web DeskFirst Published Oct 13, 2018, 8:25 PM IST
Highlights

ರಾಜೀನಾಮೆ ನೀಡಿದ ಬಳಿಕ ಕ್ಷೇತ್ರಕ್ಕೆ ತೆರಳಿದ ಎನ್.ಮಹೇಶ್ ರಾಜೀನಾಮೆ ಕಾರಣ ಮತ್ತು ವಿವರಣೆ ನೀಡಿದ್ದಾರೆ. ಮಾತನಾಡುತ್ತ ಭಾವುಕರಾಗಿದ್ದಾರೆ.

ಚಾಮರಾಜನಗರ[ಅ.13]  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸ್ವ ಕ್ಷೇತ್ರಕ್ಕೆ ಎನ್.ಮಹೇಶ್ ಮರಳಿದ್ದು ಅವರಿಗೆ ಅದ್ದೂರಿ ಸ್ವಾಗತವೂ ಸಿಕ್ಕಿದೆ. ಬಿಎಸ್ ಪಿ ಶಾಸಕರಗಿರುವ ಮಹೇಶ್ ಸಮ್ಮಿಶ್ರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಬಳಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗ ಸಿಕ್ಕಿತು. ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಿಕ್ಷಣ ಖಾತೆ ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ದಿನದ 24 ಗಂಟೆ ಕಾರ್ಯ ನಿರ್ವಹಿಸಿದಾಗ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ಶಿಕ್ಷಣ ಖಾತೆಯಂತಹ ದೊಡ್ಡ ಖಾತೆ ಜವಾಬ್ದಾರಿಯನ್ನು ನನಗೆ ನೀಡಿದ್ದರಿಂದ ಕ್ಷೇತ್ರದ ಕಡೆ ಗಮನ ಹರಿಸಲಾಗುತ್ತಿರಲಿಲ್ಲ ಎಂದು ಕಾರಣ ನೀಡಿದರು.

ನನಗೆ ಅಧಿಕಾರಕ್ಕಿಂತ ಪಕ್ಷ ಮುಖ್ಯ, ನಾನು ಕೂಡ ಸಮಿಶ್ರ ಸರಕಾರದಲ್ಲಿ  ಪಾಲುದಾರ. ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಮಾತ್ರ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ. ಕಾಂಗ್ರೆಸ್ ವಿರುದ್ದ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.


 

click me!