ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ ಬಿಜೆಪಿಗೇ ಮತ!

Published : Apr 02, 2017, 07:36 AM ISTUpdated : Apr 11, 2018, 01:01 PM IST
ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ ಬಿಜೆಪಿಗೇ ಮತ!

ಸಾರಾಂಶ

ಪಂಚರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹಲವಾರು ರಾಜಕಾರಣಿಗಳು ವಿದ್ಯುನ್ಮಾನ ಮತಯಂತ್ರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆ ಶಂಕೆಗೆ ಇಂಬು ನೀಡುವಂತಹ ಬೆಳವಣಿಗೆಯೊಂದು ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಧಾನಸಭೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತಯಂತ್ರ ಗಳ ಪ್ರಾತ್ಯಕ್ಷಿಕೆ ನೀಡುವಾಗ ಯಾವುದೇ ಗುಂಡಿ ಒತ್ತಿದರೂ ಬಿಜೆಪಿಗೇ ಮತ ಚಲಾವಣೆಯಾದ ವಿಚಿತ್ರ ಪ್ರಸಂಗ ಬೆಳಕಿಗೆ ಬಂದಿದೆ.

ನವದೆಹಲಿ(ಎ.02): ಪಂಚರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹಲವಾರು ರಾಜಕಾರಣಿಗಳು ವಿದ್ಯುನ್ಮಾನ ಮತಯಂತ್ರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆ ಶಂಕೆಗೆ ಇಂಬು ನೀಡುವಂತಹ ಬೆಳವಣಿಗೆಯೊಂದು ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಧಾನಸಭೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತಯಂತ್ರ ಗಳ ಪ್ರಾತ್ಯಕ್ಷಿಕೆ ನೀಡುವಾಗ ಯಾವುದೇ ಗುಂಡಿ ಒತ್ತಿದರೂ ಬಿಜೆಪಿಗೇ ಮತ ಚಲಾವಣೆಯಾದ ವಿಚಿತ್ರ ಪ್ರಸಂಗ ಬೆಳಕಿಗೆ ಬಂದಿದೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಯಿಂದ ವಿವರವಾದ ವರದಿ ಕೇಳಿದೆ. ಇದೇ ವೇಳೆ, ಈ ವಿಚಾರವನ್ನು ಪ್ರಸಾರ ಅಥವಾ ಪ್ರಕಟ ಮಾಡಿದರೆ ಪೊಲೀಸ್ ಠಾಣೆಯಲ್ಲಿ ಬಂಧಿಸಿಡುತ್ತೇನೆ ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸಲೀನಾ ಸಿಂಗ್ ಪತ್ರಕರ್ತರಿಗೆ ಆವಾಜ್ ಹಾಕಿದ್ದಾರೆ. ಇದೆ ವೇಳೆ ಕೇಂದ್ರ ಚುನಾವಣಾ ಆಯೋಗ ಯಂತ್ರದ ಪರಿಶೀಲನೆಗಾಗಿ ಉನ್ನದ ಮಟ್ಟದ ತನಿಖಾ ಸಮಿತಿಯನ್ನು ರವಾನಿಸಲು ನಿರ್ಧರಿಸಿದೆ.

ಈ ನಡುವೆ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್, ಆಮ್ಆದ್ಮಿ, ಆರ್ಜೆಡಿ ಪಕ್ಷಗಳು, ಈ ಕುರಿತು ವಿಸ್ತೃತ ತನಿಖೆಗೆ ಒತ್ತಾಯಿಸಿವೆ.

ಪ್ರಕರಣ ಹಿನ್ನೆಲೆ: ಮಧ್ಯಪ್ರದೇಶದ ಭಿಂಡ್ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ವಾರ ಉಪಚುನಾವಣೆ ನಡೆಯಲಿದೆ. ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬುದನ್ನು ಮತಯಂತ್ರದಲ್ಲೇ ‘ಚೀಟಿ' ಮೂಲಕ ವೀಕ್ಷಿಸ ಬಹುದಾದ ವಿವಿಪಿಎಟಿ (ವೋಟರ್ ವೆರಿಫಬಲ್ ಪೇಪರ್ ಆಡಿಟ್ ಟ್ರಯಲ್) ವ್ಯವಸ್ಥೆಯುಳ್ಳ ಮತಯಂತ್ರಗಳನ್ನು ಮತಗಟ್ಟೆಗಳಲ್ಲಿ ನಿಯೋ ಜಿಸಲು ಉದ್ದೇಶಿಸಲಾಗಿದೆ. ಇದರ ಪ್ರಾತ್ಯಕ್ಷಿಕೆ ನೀಡುವಾಗ ಯಾವುದೇ ಗುಂಡಿ ಒತ್ತಿದರೂ ಅದು ಬಿಜೆಪಿಗೆ ಚಲಾವಣೆಯಾಗಿರುವುದನ್ನು ‘ಚೀಟಿ' ತೋರಿಸಿದೆ.

ಈ ಚೀಟಿಯನ್ನು 7 ಸೆಕೆಂಡ್ಗಳ ಕಾಲ ಮತಯಂತ್ರದಲ್ಲಿ ವೀಕ್ಷಿಸಬಹುದು. ಅದು ಮತದಾರರ ಕೈಗೆ ಸಿಗುವುದಿಲ್ಲ. ಮತಯಂತ್ರದಲ್ಲೇ ಇರುವ ಪೆಟ್ಟಿಗೆಗೆ ಹೋಗಿ ಸೇರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!