ಸಹಿ ಸಂಗ್ರಹಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಈಶ್ವರಪ್ಪ ಒತ್ತಾಯ

Published : Jan 25, 2017, 12:38 PM ISTUpdated : Apr 11, 2018, 01:05 PM IST
ಸಹಿ ಸಂಗ್ರಹಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಈಶ್ವರಪ್ಪ ಒತ್ತಾಯ

ಸಾರಾಂಶ

ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಿ 20 ವರ್ಷಗಳಿಂದ ಪಕ್ಷದಲ್ಲಿರೋ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಸಹಿ ಸಂಗ್ರಹ ಮಾಡುವ ಮೂಲಕ ಪಕ್ಷದಲ್ಲಿ ಅಶಿಸ್ತು ಉಂಟು ಮಾಡಲು ಹೊರಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳೂಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. 

ಬಾಗಲಕೋಟೆ (ಜ.25): ಸಹಿ ಸಂಗ್ರಹ ಮಾಡುವ ಕ್ರಮ ನಮ್ಮ ಪಕ್ಷದಲ್ಲಿಲ್ಲ, ಅದೊಂದು ಅಶಿಸ್ತು, ಈ ಸಹಿ ಸಂಗ್ರಹಕ್ಕೆ ಬೆಲೆ ಇಲ್ಲ, ಇಂತಹ ಸಹಿ ಸಂಗ್ರಹಕ್ಕೆ ಪ್ರೇರಣೆ ಕೊಟ್ಟವರ ವಿರುದ್ಧ  ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಮ್ಮ ಪಕ್ಷದಲ್ಲಿ ಸಹಿ ಸಂಗ್ರಹ ವಿಚಾರವಾಗಿ ರಾಜ್ಯ ಉಸ್ತುವಾರಿ ಮುರಳಿಧರ ಅವರಿಗೆ ಮಾಹಿತಿ ನೀಡಿದ್ದೇನೆ, ಎಂದಿದ್ದಾರೆ.

ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಿ 20 ವರ್ಷಗಳಿಂದ ಪಕ್ಷದಲ್ಲಿರೋ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಸಹಿ ಸಂಗ್ರಹ ಮಾಡುವ ಮೂಲಕ ಪಕ್ಷದಲ್ಲಿ ಅಶಿಸ್ತು ಉಂಟು ಮಾಡಲು ಹೊರಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳೂಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. 

ರಾಯಣ್ಣ ಬ್ರಿಗೇಡ್​ ಏಳಿಗೆಯನ್ನು  ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಯಡಿಯೂರಪ್ಪನವರಿಗೆ ಸಹಿಸಲಾಗುತ್ತಿಲ್ಲ, ಆದರೆ ಯಾವುದೇ ಕಾರಣಕ್ಕೂ ನಾಳೆ ಕೂಡಲಸಂಗಮದಲ್ಲಿ ನಡೆಯಲಿರುವ ಸಮಾವೇಶ ನಿಲ್ಲುವುದಿಲ್ಲ, ಸಮಾವೇಶ ನಡೆಸಿದ ಬಳಿಕ ಸಮಸ್ಯೆ ಬಗೆ ಹರಿಸಲು ತುರ್ತು ಸಭೆ ಕರೆಯುವಂತೆ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಲಾಗುವುದು, ಸಭೆಯನ್ನ ದೆಹಲಿ ಇಲ್ಲವೆ ಬೆಂಗಳೂರಿನಲ್ಲಿ ಎಲ್ಲೇ ಕರೆದರೂ ಹೋಗುತ್ತೇನೆ,  ಎಂದು ಈಶ್ವರಪ್ಪ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
ಪ್ರಾಜೆಕ್ಟ್ ಖುಷಿ 3 ತಿಂಗಳ ಸ್ವಾಸ್ಥ್ಯ ಅಭಿಯಾನದಲ್ಲಿ ಹಲವು ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬೆಂಗಳೂರು ಪೊಲೀಸ್!