
ಬೆಂಗಳೂರು (ಏ. 03): ಸಿದ್ದರಾಮಯ್ಯನವರು ಐದು ವರ್ಷದಲ್ಲಿ ಎಷ್ಟು ಬಾರಿ ಕಾಗಿನೆಲೆಗೆ ಭೇಟಿ ನೀಡಿದ್ದಾರೆ. ನಂದಗಡಕ್ಕೆ , ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿಗೆ ಒಮ್ಮೆಯೂ ಸಿದ್ದರಾಮಯ್ಯ ಹೋಗಿಲ್ಲ. ಹಿಂದುಳಿದವರ ಹೆಸರು ಹೇಳಿ ಮುಖ್ಯಮಂತ್ರಿ ಆದ್ರು. ಮುಖ್ಯಮಂತ್ರಿ ಆಗುತ್ತಿದ್ದಂತೆ ಎಲ್ಲರನ್ನೂ ಮರೆತರು ಎಂದು ಸಿಎಂ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದಿದ್ದಾರೆ.
ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ ಎಂದಿದ್ದರು. ಹೌದು ಸಿದ್ದರಾಮಯ್ಯಗೆ ಇದು ಕೊನೇ ಚುನಾವಣೆ. ಹೈಕಮಾಂಡ್ ಹೇಳದಿದ್ರು, ನಾನೆ ಮತ್ತೆ ಮುಖ್ಯಮಂತ್ರಿ ಅಂತಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ನೀವು ಮೊದಲು ಗೆದ್ದು ಎಂಎಲ್ ಎ ಆಗಿ ಸಾಕು ನೋಡೊಣ. ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲು ಗೆದ್ದು ಬನ್ನಿ ಸಿದ್ದರಾಮಯ್ಯನವರೇ ಎಂದು ಈಶ್ವರಪ್ಪ ಸವಾಲು ಎಸೆದಿದ್ದಾರೆ.
ಹಾವೇರಿಯ ಕಾಗಿನೆಲೆಯಲ್ಲಿ ನಡೆಯುತ್ತಿರೋ ಸಮಾವೇಶದಲ್ಲಿ ಈಶ್ವರಪ್ಪ ಮಾತನಾಡುತ್ತಾ, ಕನಕದಾಸರನ್ನು ಸ್ಮರಿಸಿದ್ದಾರೆ. ಸಂಗೊಳ್ಳಿ ರಾಯಣ್ಣ, ಕನಕದಾಸರ ನೆನಪು ಸಿದ್ದರಾಮಯ್ಯನವರಿಗೆ ಈಗ ಬಂದಿದೆ.. ಚುನಾವಣೆ ಸಂದರ್ಭದಲ್ಲಿ ಈಗ ಅವರೆಲ್ಲರ ನೆನನಪಾಗುತ್ತಿದೆ. ಇದು ಸಿದ್ದರಾಮಯ್ಯನವರ ಕೊನೆ ಚುನಾವಣೆ. ರಾಜ್ಯದಲ್ಲಿ ಕಾಂಗ್ರೆಸ್ ಔಟ್ ಬಿಜೆಪಿ ಇನ್ ಆಗುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.