ಆನೆ ಬಾಯಿಯಿಂದ ಬರುತ್ತಿದೆ ದಟ್ಟವಾದ ಹೊಗೆ : ವಿಡಿಯೋ ಭಾರೀ ವೈರಲ್..!

By Suvarna Web DeskFirst Published Mar 27, 2018, 8:25 AM IST
Highlights

ಕಾಡು ಆನೆಯೊಂದು ಬಾಯಿಯಿಂದ ಹೊಗೆ ಉಗುಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ನವದೆಹಲಿ: ಕಾಡು ಆನೆಯೊಂದು ಬಾಯಿಯಿಂದ ಹೊಗೆ ಉಗುಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಆನೆಯ ಈ ವರ್ತನೆಗೆ ನಾನಾ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ಆದರೆ, ಕಾಡಿನಲ್ಲಿ ಬೆಂಕಿ ಬಿದ್ದಾಗ ಇದ್ದಿಲನ್ನು ತಿಂದಿದ್ದರಿಂದ ಆನೆ ತನ್ನ ಬಾಯಿಂದ ಹೊಗೆ ಉಗುಳಿತ್ತು ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ.

ವೈಲ್ಡ್‌ಲೈಫ್‌ ಕನ್ಸರ್ವೇಶನ್‌ ಸೊಸೈಟಿ (ಡಬ್ಲ್ಯುಸಿಎಸ್‌) ಇಂಡಿಯಾ ಪ್ರೋಗ್ರಾಮ್‌ನ ಸಹಾಯಕ ನಿರ್ದೇಶಕ ವಿನಯ್‌ ಕುಮಾರ್‌ ಎನ್ನುವವರು 2016ರ ಏಪ್ರಿಲ್‌ನಲ್ಲಿ ಆನೆ ಹೊಗೆ ಉಗುಳುತ್ತಿರುವ ವಿಡಿಯೋವನ್ನು ಸೆರೆಹಿಡಿದಿದ್ದರು. ಆನೆಯ ಈ ವರ್ತನೆ ವಿಜ್ಞಾನಿಗಳು ಮತ್ತು ಪ್ರಾಣಿ ತಜ್ಞರಿಗೂ ಒಗಟಾಗಿ ಪರಿಣಮಿಸಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಡಬ್ಲ್ಯುಸಿಎಸ್‌ ಪ್ರೋಗ್ರಾಮ್‌ ಇಂಡಿಯಾದ ಹಿರಿಯ ವಿಜ್ಞಾನಿ ವರುಣ್‌ ಎಸ್‌. ಗೋಸ್ವಾಮಿ, ಕಾಡಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಆನೆ ಸೊಂಡಿಲಿನಿಂದ ಬಾಚಿಕೊಂಡು ಇದ್ದಿಲನ್ನು ಸೇವಿಸಿದೆ. ಬಾಯಿಗೆ ಹಾಕಿಕೊಂಡ ಬಳಿಕ ಉರಿಯುತ್ತಿರುವ ಬೂದಿಯನ್ನು ಹೊರಗೆ ಉಗುಳಿದೆ. ಹೀಗಾಗಿ ಆನೆಯ ಬಾಯಿಯಿಂದ ಹೊಗೆ ಹೊರ ಬಂದಿದೆ ಎಂದು ಹೇಳಿದ್ದಾರೆ. ಇದ್ದಿಲುಗಳು ಕಾಡುಪ್ರಾಣಿಗಳಿಗೆ ಇಷ್ಟದ ಆಹಾರವಾಗಿದೆ.

 

click me!