
ಬೆಂಗಳೂರು (ಜ.23): ಬೆಂಗಳೂರಿಗರೇ ನಿಮಗೊಂದು ಸಿಹಿ ಸುದ್ದಿ. ಸದ್ಯದಲ್ಲೇ ಬೆಂಗಳೂರಿನ ರಸ್ತೆಗಳಿಗೆ ಎಲೆಕ್ಟ್ರಿಕಲ್ ಬಸ್ ರೋಡಿಗಿಳಿಸಲು ಬಿಎಂಟಿಸಿ ಸಜ್ಜಾಗಿದೆ. 150 ಎ.ಸಿ.ಎಲೆಕ್ಟ್ರಿಕಲ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಿದ್ದು, ಈ ತಿಂಗಳ ಅಂತ್ಯದಲ್ಲಿ ಟೆಂಡರ್ ಫೈನಲ್ ಆಗಲಿದ್ದು,ಏಪ್ರಿಲ್ ವೇಳೆಗೆ ಬಸ್ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ.
ಸಿಟಿ ಬಸ್ ಗಳಿಗೆ ಡೀಸೆಲ್ ಹಾಕಿ ಲಾಸ್ ಆಗಿರೋ ಬಿಎಂಟಿಸಿ ನಗರದ ರಸ್ತೆಗಳಿಗೆ ಶೀಘ್ರವೇ ಎಲೆಕ್ಟ್ರಿಕಲ್ ಆಧಾರಿತ 150 ಬಸ್'ಗಳನ್ನು ರೋಡಿಗಿಳಿಸಲು ಟೆಂಡರ್ ಕರೆದಿದೆ. ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ಮ್ಯಾನು ಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕಲ್ಸ್ ಅನುದಾನ ಬಳಸಿಕೊಂಡು ಬಿಎಂಟಿಸಿ ಈ ಯೋಜನೆ ಕೈಗೆತ್ತಿಕೊಂಡಿದೆ.
ಬಿಎಂಟಿಸಿ ಟೆಂಡರ್ ಷರತ್ತುಗಳು
* ಎಲೆಕ್ಟ್ರಿಕಲ್ ಬಸ್ಗಳನ್ನು 2 ವರ್ಷ ನಿರ್ವಹಣೆ ಮಾಡಿದ ಅನುಭವವಿರಬೇಕು
* ಕನಿಷ್ಠ 300 ಎಲೆಕ್ಟ್ರಿಕಲ್ ಬಸ್ ನಿರ್ವಹಣೆ ಮಾಡಿರಬೇಕು
* ಸೂಕ್ತವಾದ ರೀಚಾರ್ಜಿಂಗ್ ಘಟಕ ಹೊಂದಿರಬೇಕು
* ಕಂಪನಿಯೇ ಬಸ್ಗಳ ನೋಂದಣಿ, ವಿಮೆ
* ಮೋಟಾರು ವಾಹನ ತೆರಿಗೆ, ಸೇವಾ ತೆರಿಗೆ ಪಾವತಿಸಬೇಕು
* ಕಂಪನಿಯೇ ಚಾಲಕರು, ನಿರ್ವಾಹಕರನ್ನ ನೀಡಬೇಕು
* 10 ವರ್ಷದ ಒಪ್ಪಂದದಂತೆ ಗುತ್ತಿಗೆ ಪಡೆದ ಕಂಪನಿಗೆ ಯೋಜನೆ
ಚಾರ್ಜಿಂಗ್ ಘಟಕ ಎಲೆಕ್ಟ್ರಿಕ್ ಬಸ್ ಪ್ರಮುಖ ಭಾಗವಾಗಿದೆ. ಟೆಂಡರ್ನಲ್ಲಿನ ಷರತ್ತಿನಂತೆ ಚಾರ್ಜಿಂಗ್ ಘಟಕಕ್ಕೆ ಬೇಕಾಗಿರುವ ಭೂಮಿ ಮತ್ತು ಘಟಕದಸ್ಥಾಪನೆ ಜವಾಬ್ದಾರಿಯೂ ಕಂಪನಿಯ ಮೇಲಿರಲಿದೆ. ಪ್ರತಿ ಬಸ್ನ ವಿದ್ಯುತ್ ಬಳಕೆ ವೆಚ್ಚವನ್ನು ಬಿಎಂಟಿಸಿ ಭರಿಸಲಿದೆ. ಬಿಎಂಟಿಸಿಗೆ 40 ಎಲೆಕ್ಟ್ರಿಕಲ್ ಬಸ್ ಗಳನ್ನ ಪಡೆಯಲು ಸದ್ಯಕ್ಕೆ ಒಪ್ಪಿಗೆ ಸಿಕ್ಕಿದೆ.
ಒಟ್ಟಿನಲ್ಲಿ ಲೋಕಲ್ ಬಸ್ ಗಳಿಗೆ ಡೀಸೆಲ್ ಹಾಕಿ ಸುಸ್ತಾಗಿದ್ದ ಬಿಎಂಟಿಸಿ ಇದೀಗ ದುಬಾರಿ ಬೆಲೆಯ ಬಸ್ ಗಳ ಖರೀದಿಗೆ ಕೈಹಾಕಿದೆ. ಬೆಂಗಳೂರು ರಸ್ತೆ ಹಾಗೂ ಇಲ್ಲಿನ ಟ್ರಾಫಿಕ್ ಕಿರಿಕಿರಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳು ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದೆ ಕುತೂಹಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.