ಲೋಕ ಚುನಾವಣೆ ವೇಳೆ ಪಕ್ಷಗಳಿಗೆ 4444 ಕೋಟಿ ರೂ ದೇಣಿಗೆ ಬಾಂಡ್| 14 ತಿಂಗಳಲ್ಲಿ 5800 ಕೋಟಿ ರು. ಸಂದಾಯ
ಇಂದೋರ್[ಜೂ.17]: ದೇಶದ ರಾಜಕೀಯ ಪಕ್ಷಗಳಿಗೆ ಕಳೆದ 10 ತಿಂಗಳ ಅವಧಿಯಲ್ಲಿ 5800 ಕೋಟಿ ರು. ದೇಣಿಗೆ ಚುನಾವಣಾ ಬಾಂಡ್ ಮೂಲಕ ಹರಿದುಬಂದಿದೆ.
ಈ ಪೈಕಿ ಲೋಕಸಭೆ ಚುನಾವಣೆ ನಡೆದ ಎರಡೇ ತಿಂಗಳ ಅವಧಿಯಲ್ಲಿ ಶೇ.75 ರಷ್ಟುದೇಣಿಗೆ ಅಂದರೆ, 4444.32 ಕೋಟಿ ರು. ದೊರೆತಿದೆ ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.
2018ರ ಮಾ.1ರಿಂದ 2019ರ ಮೇ 10ರವರೆಗೆ 7 ಕಂತುಗಳಲ್ಲಿ ಬಾಂಡ್ ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ 5851 ಕೋಟಿ ರು. ಸಂಗ್ರಹವಾಗಿದೆ. ಈ ಪೈಕಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾ.1ರಿಂದ ಮೇ 10ರವರೆಗೆ 3 ಕಂತುಗಳಲ್ಲಿ 4444.32 ಕೋಟಿ ರು. ಬಾಂಡ್ ಮಾರಾಟವಾಗಿದೆ ಎಂದು ಆರ್‌ಟಿಐನಡಿ ಎಸ್‌ಬಿಐ ಉತ್ತರ ನೀಡಿದೆ.