
ಕನಕಗಿರಿ (ಮೇ. 21): ಉತ್ತರ ಕರ್ನಾಟಕ ಭಾಗದಲ್ಲಿ ಮದುಮಕ್ಕಳು ತಮ್ಮ ಬಾಸಿಂಗವನ್ನು ಪೂಜೆ ಮಾಡಿ ಹರಿಯುವ ನೀರಿನಲ್ಲಿ ಬಿಡುವ ಸಂಪ್ರದಾಯವಿದೆ. ಆದರೆ ನೀರಿನ ಅಭಾವದಿಂದಾಗಿ ವಧುವರರು ತಮ್ಮ ಬಾಸಿಂಗಗಳನ್ನು ಅನಿವಾರ್ಯವಾಗಿ ಬುಟ್ಟಿಯಲ್ಲಿಟ್ಟು, ಅದಕ್ಕೆ ನೀರು ಚಿಮುಕಿಸಿ ಬಾವಿಯಲ್ಲಿ ಬಿಟ್ಟಅಪರೂಪದ ಘಟನೆ ಕನಕಗಿರಿ ವೆಂಕಟಾಚಲಪತಿಯ ಸನ್ನಿಧಿಯಲ್ಲಿ ನಡೆದಿದೆ.
ಸಾಮಾನ್ಯವಾಗಿ ವೆಂಕಚಾಚಲಪತಿ ಸನ್ನಿಧಿಯಲ್ಲಿನ ಪುಷ್ಕರಣಿ, ವೆಂಕಟಾಚಲಪತಿ ಬಾವಿ ಇಲ್ಲವೇ ಪುಷ್ಪ, ಜಯಂತಿ, ಗೋಪಿಕಾ ಹಳ್ಳಗಳು ಸೇರುವ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುತ್ತಾರೆ. ಆದರೆ ಪಟ್ಟಣದ ಪುಷ್ಕರಣಿ ಹಾಗೂ ವೆಂಕಟಾಚಲಪತಿ ಬಾವಿ ನೀರಿಲ್ಲದೇ ಬರಿದಾಗಿವೆ. ಆದರೆ ತ್ರಿವೇಣಿ ಸಂಗಮಕ್ಕೆ ಶೌಚದ ನೀರು ಸೇರುತ್ತಿದ್ದರಿಂದ ಇಲ್ಲಿ ಯಾರೂ ಇಂತಹ ಧಾರ್ಮಿಕ ಕಾರ್ಯಗಳನ್ನು ಈಗ ಮಾಡುವುದಿಲ್ಲ.
ದಾಂಪತ್ಯಕ್ಕೆ ಕಾಲಿಟ್ಟಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದ ದಂಪತಿ ಸೋಮವಾರ ತಮ್ಮ ಬಾಸಿಂಗ, ವಸ್ತ್ರ, ಹೂ ಇತ್ಯಾದಿಗಳನ್ನು ನೀರಿನಲ್ಲಿ ಬಿಡಲು ಐತಿಹಾಸಿಕ ಸ್ಥಳವಾಗಿದ್ದರಿಂದ ಕನಕಗಿರಿಗೆ ಆಗಮಿಸಿದ್ದರು. ಆದರೆ ಎಲ್ಲೆಡೆ ನೀರಿನ ಬರ ಅವರನ್ನು ಕಾಡಿತು. ಎಲ್ಲಿ ಬಿಡಬೇಕೆಂಬ ಗೊಂದಲಕ್ಕೆ ಈಡಾದರು. ಇದರಿಂದ ವೆಂಕಟಾಚಲಪತಿ ಬಾವಿಯೊಳಗೆ ಸಣ್ಣದೊಂದು ಬುಟ್ಟಿಯಲ್ಲಿ ನೀರು ಹಾಕಿ ಬಾಸಿಂಗ, ವಸ್ತ್ರ, ಹೂಗಳನ್ನು ಹರಿಬಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.