
ಹಾಸನ(ಅ.18): ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಬಯಲು ಸೀಮೆಗೆ ಕುಡಿಯಲು ನೀರು ಕೊಡುವುದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ನೀರು ಸಿಗುತ್ತದೆ ಅನ್ನೋ ಖುಷಿಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜನರಿದ್ದರೆ, ನೀರು ನೀಡೋ ಪಶ್ಚಿಮಘಟ್ಟ ಸಕಲೇಶಪುರದ ಜನರು ಜೀವಭಯದಲ್ಲಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದ ಮಾರನಹಳ್ಳಿ ಜನರಿಗೆ ಎತ್ತಿನಹೊಳೆ ಕಾಮಗಾರಿ ನೇರವಾಗಿ ತಟ್ಟಿದೆ. ನೀರು ಹರಿಸಲು ಕಲ್ಲು ಬಂಡೆ ಕೊರೆದು ಕಾಮಗಾರಿ ನಡೆಸಲಾಗುತ್ತಿದೆ. ಸುರಂಗ ಕೊರೆಯಲು ಸಿಡಿಮದ್ದು ಸ್ಪೋಟಕ ಬಳಸಲಾಗುತ್ತಿದ್ದು, ಸ್ಪೋಟಕದ ರಭಸಕ್ಕೆ ಮಾರನಹಳ್ಳಿಯ ಹತ್ತಾರು ಮನೆಗಳ ಮೇಲ್ಚಾವಣಿ ,ಗೋಡೆ ಬಿರುಕು ಬಿಟ್ಟಿವೆ. ಮನೆಹಾನಿ ಪರಿಹಾರ ನೀಡಲು ನೀರಾವರಿ ಇಲಾಖೆಯಾಗಲೀ, ಲೋಕೋಪಯೋಗಿ ಇಲಾಖೆಯಾಗಲಿ ಮುಂದಾಗುತ್ತಿಲ್ಲ.
ಇನ್ನು ಸಿಎಂ, ಡಿಸಿ ಎಲ್ಲರಿಗೂ ದೂರು ನೀಡಿದ್ದರೂ ಪ್ರಯೋಜನವಾಗದೇ ಸರ್ಕಾರಕ್ಕೆ ಮಾರನಹಳ್ಳಿ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.