ಜಾರಿ ನಿರ್ದೇಶನಾಲಯದಿಂದ ಮಲ್ಯಗೆ ಸೇರಿದ ಫಾರ್ಮ್'ಹೌಸ್ ಮುಟ್ಟುಗೋಲು

By Suvarna Web DeskFirst Published May 18, 2017, 6:19 PM IST
Highlights

ಮನಿ ಲ್ಯಾಂಡರಿಂಗ್ ತನಿಖೆ ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯರಿಗೆ ಸೇರಿದ ಮಹಾರಾಷ್ಟ್ರದ ಅಲಿಯಾಬಾಗ್ ನಲ್ಲಿರುವ 100 ಕೋಟಿ ಮೌಲ್ಯದ ಫಾರ್ಮ್ ಹೌಸನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ನವದೆಹಲಿ (ಮೇ.18): ಮನಿ ಲ್ಯಾಂಡರಿಂಗ್ ತನಿಖೆ ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯರಿಗೆ ಸೇರಿದ ಮಹಾರಾಷ್ಟ್ರದ ಅಲಿಯಾಬಾಗ್ ನಲ್ಲಿರುವ 100 ಕೋಟಿ ಮೌಲ್ಯದ ಫಾರ್ಮ್ ಹೌಸನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

17 ಎಕರೆ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಕಳೆದ ವರ್ಷವೇ ಮನಿ ಲ್ಯಾಂಡರಿಂಗ್ ತಡೆ ಕಾಯ್ದೆಯಡಿಯಲ್ಲಿ ಈ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಂಡಿತ್ತು. ಇದನ್ನು ಪ್ರಶ್ನಿಸಿ ಮನಿ ಲ್ಯಾಂಡರಿಂಗ್ ತಡೆ ಮಂಡಳಿಗೆ ಮಂದ್ವ  ಫಾರ್ಮ್ ಪ್ರೈವೇಟ್ ಲಿಮಿಟೆಡ್ ಮೇಲ್ಮನವಿ ಸಲ್ಲಿಸಿತ್ತು. ಆದರೆ ಇದನ್ನು ಮಂಡಳಿ ತಳ್ಳಿ ಹಾಕಿತ್ತು. ಮಲ್ಯ ಫಾರ್ಮ್ ಹೌಸ್ ಗೆ ಜಾರಿ ನಿರ್ದೇಶನಾಲಯ ಇಂದು ಸ್ವಾದೀನ ಆದೇಶವನ್ನು ಕಳುಹಿಸಿದೆ. ಆಸ್ತಿಯ ನೊಂದಾಯಿತ ಮೌಲ್ಯ 25 ಕೋಟಿಯಿದ್ದು ಮಾರುಕಟ್ಟೆ ಮೌಲ್ಯ 100 ಕೋಟಿಯಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

click me!