ಆರ್ಥಿಕಾಭಿವೃದ್ಧಿಯಲ್ಲಿ ಭಾರತ ಏಷ್ಯಾದಲ್ಲೇ ನಂ.1

By Kannadaprabha NewsFirst Published Jul 20, 2018, 10:03 AM IST
Highlights

ಜಿಎಸ್‌ಟಿ ಹಾಗೂ ಅಪನಗದೀಕರಣದಂ ತಹ ಆರ್ಥಿಕ ಸುಧಾರಣೆಗಳು ಫಲ ನೀಡಲು ಆರಂಭಿಸಿ ದಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಏಷ್ಯಾದಲ್ಲೇ ವೇಗದ ಪ್ರಗತಿ ಕಾಣುತ್ತಿರುವ ದೇಶ ಭಾರತ ಆಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪ್ರಶಂಸಿಸಿದೆ. 

ನವದೆಹಲಿ: ಜಿಎಸ್‌ಟಿ ಹಾಗೂ ಅಪನಗದೀಕರಣದಂ ತಹ ಆರ್ಥಿಕ ಸುಧಾರಣೆಗಳು ಫಲ ನೀಡಲು ಆರಂಭಿಸಿ ದಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಏಷ್ಯಾದಲ್ಲೇ ವೇಗದ ಪ್ರಗತಿ ಕಾಣುತ್ತಿರುವ ದೇಶ ಭಾರತ ಆಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪ್ರಶಂಸಿಸಿದೆ. 

2018ರಲ್ಲಿ ನಿರೀಕ್ಷಿಸಲಾಗಿರುವ ಶೇ.7.3 ಹಾಗೂ 2019ರ ಶೇ.7.6 ಗುರಿಯನ್ನು ತಲುಪುವ ಹಾದಿಯಲ್ಲಿ ಭಾರತ ಇದೆ ಎಂದು
‘ಏಷ್ಯಾ ಅಭಿವೃದ್ದಿ ಮುನ್ನೋಟ’ ವರದಿಯಲ್ಲಿ ಹೇಳಲಾಗಿದೆ. ಇದೇ ವೇಳೆ ಚೀನಾದ ಆರ್ಥಿಕ ಅಭಿವೃದ್ಧಿ ದರ2018 ರಲ್ಲಿ ಶೇ.6.6 ರಷ್ಟು ಇರಲಿದ್ದು, 2019 ರಲ್ಲಿ ಅದು ಶೇ.6.4ಕ್ಕೆ ಕುಸಿಯಲಿದೆ ಎಂದು ವರದಿ ಹೇಳಿದೆ. 

click me!