ಬಿಜೆಪಿ ಸಿದ್ಧಾಂತದ ಪಕ್ಷ, ವೈಯಕ್ತಿಕ ನಿಲುವಿಗೆ ಬೆಲೆಯಿಲ್ಲ

Published : Dec 12, 2017, 09:45 PM ISTUpdated : Apr 11, 2018, 12:47 PM IST
ಬಿಜೆಪಿ ಸಿದ್ಧಾಂತದ ಪಕ್ಷ, ವೈಯಕ್ತಿಕ ನಿಲುವಿಗೆ ಬೆಲೆಯಿಲ್ಲ

ಸಾರಾಂಶ

ತಮ್ಮ ಬದಲು ಒಕ್ಕಲಿಗ ಜನಾಂಗದ ಇನ್ನೊಬ್ಬ ನಾಯಕ ಆರ್. ಅಶೋಕ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂಬ ಅಸಮಾಧಾನದಿಂದ ಡೀವಿ ಅವರು ವರಿಷ್ಠರಿಗೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕುಶಾಲನಗರ(ಡಿ.12): ಪಕ್ಷದಲ್ಲಿ ಕಡೆಗಣನೆ ಬಗ್ಗೆ ನೇರ ಪ್ರತಿಕ್ರಿಯೆ ನೀಡಲು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಿರಾಕರಿಸಿದ್ದಾರೆ.

‘ಬಿಜೆಪಿ ತತ್ವಬದ್ಧ ಸಿದ್ಧಾಂತ ಹೊಂದಿರುವ ಪಕ್ಷವಾಗಿದ್ದು, ಇಲ್ಲಿ ಪಕ್ಷದ ನಿಲುವಿಗೆ ಬೆಲೆಯೇ ಹೊರತು ವೈಯಕ್ತಿಕ ನಿಲುವಿಗಲ್ಲ’ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಡುವ ಉತ್ತರ ನೀಡಿದ್ದಾರೆ. ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಒಕ್ಕಲಿಗ ಜನಾಂಗದ ಪ್ರಮುಖ ನಾಯಕನಾದ ತಮ್ಮನ್ನು ಕಡೆಗಣಿಸಲಾಗುತ್ತಿದೆ. ತಮ್ಮ ಬದಲು ಒಕ್ಕಲಿಗ ಜನಾಂಗದ ಇನ್ನೊಬ್ಬ ನಾಯಕ ಆರ್. ಅಶೋಕ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂಬ ಅಸಮಾಧಾನದಿಂದ ಡೀವಿ ಅವರು ವರಿಷ್ಠರಿಗೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕುಶಾಲನಗರದಲ್ಲಿ  ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡದ ಸಚಿವ, ಭಾರತೀಯ ಜನತಾ ಪಕ್ಷ ಜಾತಿ, ಧರ್ಮ ಆಧಾರಿತ ವ್ಯವಸ್ಥೆಗೆ ಸೀಮಿತವಲ್ಲ ಎಂದಷ್ಟೇ ಉತ್ತರಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ
ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?