
ನವದೆಹಲಿ(ಅ.09): ಬನಾರಸ್ ಹಾಗೂ ಅಲಿಘಡ್ ವಿವಿಗಳು ಹಿಂದು ಮತ್ತು ಮುಸ್ಲಿಂ ಹೆಸರುಗಳನ್ನು ಬದಲಿಸುವಂತೆ ಯುಜಿಸಿ(ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕೇಂದ್ರದಿಂದ ಅನುದಾನ ಪಡೆಯುವ ವಿವಿಗಳು ಜಾತ್ಯಾತೀತ ವಿಶ್ವವಿದ್ಯಾಲಯವಾಗಿರಬೇಕು ಜೊತೆಗೆ ಧರ್ಮದ ಆಧಾರದಿಂದ ಮುಕ್ತವಾಗಿರಬೇಕು. ಯಾವುದೇ ರೀತಿಯ ಧಾರ್ಮಿಕ ಹೆಸರನ್ನು ಹೊಂದಿರಬಾರದು ಎಂದು ಮಂಡಳಿ ತಿಳಿಸಿದೆ. ಅಲಿಘಡ ವಿವಿಗೆ ಅಲಿಘಡ ವಿವಿ ಅಥವಾ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಹೆಸರನ್ನು ಇಟ್ಟುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ. ಅದೇ ರೀತಿ ಬನಾರಸ್ ವಿವಿಯನ್ನು ಪುನರ್ ನಾಮಕರಣ ಮಾಡುವಂತೆ ಸೂಚಿಸಿದೆ.
ಅನುದಾನ ಪಡೆಯುವ 10 ಕೇಂದ್ರೀಯ ವಿವಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ದೂರುಗಳನ್ನು ಅವಲೋಕಿಸುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಇದೇ ಏಪ್ರಿಲ್'ನಲ್ಲಿ ಪ್ರತಿಷ್ಟಿತ ವಿವಿಗಳ ಶೈಕ್ಷಣಿಕ ಪರಿಣಿತರನ್ನು ಹೊಂದಿರುವ ಮಂಡಳಿ ರಚಿಸಿತ್ತು. ಅಲಿಗಢ ಮುಸ್ಲಿಂ ವಿವಿಯನ್ನು ಸರ್ ಸಯ್ಯದ್ ಅಹ್ಮದ್ ಖಾನ್, ಹಿಂದೂ ಬನಾರಸ್ ವಿಶ್ವವಿದ್ಯಾಲಯವನ್ನು ಮದನ ಮೋಹನ್ ಮಾಳವೀಯ ಸ್ಥಾಪಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.