ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್‌ ನೋಟ್‌ ಪತ್ತೆ!

By Web Desk  |  First Published Oct 12, 2019, 1:59 PM IST

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಡಾ. ಜಿ. ಪರಮೇಶ್ವರ್ ಪಿಎ ರಮೇಶ್| ಆತ್ಮಹತ್ಯೆ ಬೆನ್ನಲ್ಲೇ ಪತ್ತೆಯಾಯ್ತು ಡೆತ್‌ ನೋಟ್| ಡೆತ್‌ನೋಟ್‌ನಲ್ಲೇನಿದೆ?


ಬೆಂಗಳೂರು[ಅ.12]: ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಓಡಿ ಪರಾರಿಯಾಗಿದ್ದ ಪಿಎ ರಮೇಶ್ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನ ಸಾಯಿ ಗ್ರೌಂಟ್‌ನಲ್ಲಿದ್ದ ಮರಕ್ಕೆ ರಮೇಶ್ ನೇಣು ಹಾಕಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಅವರ ಕಾರಿನಲ್ಲಿ ಡೆತ್‌ ನೋಟ್ ಪತ್ತೆಯಾಗಿದೆ.

ಐಟಿ ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ!

Latest Videos

undefined

ಡೆತ್‌ ನೋಟ್‌ನಲ್ಲೇನಿದೆ?

ಎಲ್ಲರಿಗೂ ನಮಸ್ಕಾರ.

ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಸತ್ತಿದ್ದೇನೆ. ಮಾನ್ಯ ಐಟಿ ಅಧಿಕಾರಿಗಳೇ, ನನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ. ಸೌಮ್ಯ ನನ್ನನ್ನು ಕ್ಷಮಿಸು. ಮಕ್ಕಳನ್ನು ಚೆನ್ನಾಗಿ ನೋಡಿಕೋ. ಲಕ್ಷ್ಮೇದೇವಿ, ಪದ್ಮಾ, ಸತೀಶ ನಿಮ್ಮೊಂದಿಗೆ ಹುಟ್ಟಿನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ. ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿಎಸ್‌ಎಸ್‌ ಶಾಲೆಯವರಿಗೆ, ಮುಖ್ಯಸ್ಥರಿಗೆ ಕೃತಜ್ಞನಾಗಿದ್ದೇನೆ. ಅಪ್ಪ-ಅಮ್ಮ ನಿಮ್ಮನ್ನು ಮುಪ್ಪಿನಲ್ಲಿ ಸಾಕಬೇಕಿತ್ತು. ಆದರೆ ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ ಕ್ಷಮಿಸಿ. ಪರಮೇಶ್ವರ್‌ ಸಾಹೇಬ್ರು ಒಳ್ಳೆಯವರು. ಅಂಥವರ ಬಳಿ ಕೆಲಸ ಮಾಡಿದ್ದು ಪುಣ್ಯ. ಅವರಲ್ಲೂ ಸಹ ನಾನು ಕ್ಷಮೆ ಕೋರುತ್ತೇನೆ. ಆತ್ಮೀಯ ಸ್ನೇಹಿತರೇ ನಿಮ್ಮ ಬಿಟ್ಟು ಹೋಗುತ್ತಿದ್ದೇನೆ ಕ್ಷಮಿಸಿ. ನನಗೆ ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ.

- ಇಂತಿ ರಮೇಶ್‌

ಪರಂ ಪಿಎ ರಮೇಶ್ ಯಾರು..?

ಡಾ.ಜಿ. ಪರಮೇಶ್ವರ್ ಜತೆ ರಮೇಶ್ 8 ವರ್ಷ ಕಾಲ ಕೆಲಸ ಮಾಡಿದ್ದರು. ಮೊದಲು ಟೈಪಿಸ್ಟ್ ಆಗಿ ಪರಮೇಶ್ವರ್ ಕಚೇರಿಗೆ ಸೇರ್ಪಡೆಯಾಗಿದ್ದ ಅವರು ಈ ಮೊದಲು ಕೆಪಿಸಿಸಿ ಕಚೇರಿಯಲ್ಲಿಯೂ ಕೆಲಸ ಮಾಡಿದ್ದರು. ಮೂಲತಃ ರಾಮನಗರ ಜಿಲ್ಲೆಯವರಾಗಿದ್ದ ಟೈಪಿಸ್ಟ್ ರಮೇಶ್, ಬೆಂಗಳೂರಿನ ಕೆಂಗೇರಿಯ ಉಲ್ಲಾಳದಲ್ಲಿ ವಾಸಿಸುತ್ತಿದ್ದರು. 

ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ

ಐಟಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಓಡಿದ್ದ ರಮೇಶ್, ಕೆಲವು ಆಪ್ತರಿಗೆ ಫೋನ್ ಮಾಡಿ ನನ್ನ ಕೈನಲ್ಲಿ ಐಟಿ ಪ್ರಶ್ನೆಗಳಿಗೆ ಉತ್ತರಿಸಲಾಗಲ್ಲವೆಂದಿದ್ದರು. ಹೀಗಾಗಿ ಅವರು ಐಟಿ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರಾ? ಎಂಬ ಅನುಮಾನ ಹುಟ್ಟಿಕೊಂಡಿದೆ.

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!