ಏರ್ ಇಂಡಿಯಾ ಖಾಸಗೀಕರಣಕ್ಕೆ ವಿರೋಧ

By Suvarna Web DeskFirst Published Jan 8, 2018, 9:23 AM IST
Highlights

ನಷ್ಟದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಖಾಸಗೀಕರಣ ಅಥವಾ ಬಂಡವಾಳ ಹಿಂತೆಗೆತದ ಸರ್ಕಾರದ ಕನಸಿಗೆ ಸಂಸದೀಯ ಸ್ಥಾಯಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.

ನವದೆಹಲಿ (ಜ.08): ನಷ್ಟದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಖಾಸಗೀಕರಣ ಅಥವಾ ಬಂಡವಾಳ ಹಿಂತೆಗೆತದ ಸರ್ಕಾರದ ಕನಸಿಗೆ ಸಂಸದೀಯ ಸ್ಥಾಯಿ ಸಮಿತಿ ವಿರೋಧ ವ್ಯಕ್ತಪಡಿಸಿದೆ. ನಷ್ಟದ ಸುಳಿಗೆ ಸಿಲುಕಿದೆ ಎಂಬ ಕಾರಣಕ್ಕೆ ಪ್ರತಿಷ್ಠೆಯಾದ ರಾಷ್ಟ್ರೀಯ ವಿಮಾನಯಾನವನ್ನು ಈಗ ಕೈಬಿಡುವುದು ಸಮಂಜಸ ನಿರ್ಧಾರವಲ್ಲ.

ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗುವಂತೆ ಏರ್ ಇಂಡಿಯಾದ ಸಾಲ ಮನ್ನಾ ಮಾಡ ಬೇಕು. ಜತೆಗೆ, ಅದರ ಪುನಶ್ಚೇತನಕ್ಕಾಗಿ 5 ವರ್ಷ ಗಳ ಕಾಲಾವಕಾಶ ನೀಡಬೇಕು ಎಂದು ಸಂಸದೀಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ.

click me!