ಏಷ್ಯಾದಲ್ಲಿ ಶುರುವಾಗಿದೆ ಕೋಲಾಹಲ..!: 3ನೇ ಮಹಾಯುದ್ಧಕ್ಕೆ ಡ್ರ್ಯಾಗನ್ ಮುನ್ನುಡಿ?

Published : Jul 31, 2017, 09:03 AM ISTUpdated : Apr 11, 2018, 01:10 PM IST
ಏಷ್ಯಾದಲ್ಲಿ  ಶುರುವಾಗಿದೆ ಕೋಲಾಹಲ..!: 3ನೇ ಮಹಾಯುದ್ಧಕ್ಕೆ ಡ್ರ್ಯಾಗನ್ ಮುನ್ನುಡಿ?

ಸಾರಾಂಶ

ಚೀನಾ ಮೇಲೀಗ ಅಮೆರಿಕ ಕೆಂಗಣ್ಣು ಬೀರುತ್ತಿದೆ. ಅದಕ್ಕೆ ಕಾರಣ, ಮತ್ತೊಂದು ಬಾರಿ ಚೀನಾದ ಡಬಲ್ ಗೇಮ್. ಉ.ಕೊರಿಯಾಗೆ ಒಳಗೊಳಗೇ ಬೆಂಬಲ ಕೊಡುತ್ತಿರುವ ಚೀನಾ, ಯುದ್ಧದ ಕೋಲಾಹಲ ಸೃಷ್ಟಿಸುತ್ತಿದೆ.  3ನೇ ಮಹಾಯುದ್ಧಕ್ಕೆ  ಮುನ್ನುಡಿ ಬರೆಯುತ್ತಾ ಡ್ರ್ಯಾಗನ್..? ಅಂಥಾದ್ದೊಂದು ಭೀತಿಗೆ ಕಾರಣವಾಗಿರೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿರುವ ಹೇಳಿಕೆ.

ಬೀಜಿಂಗ್(ಜು.31): ಚೀನಾ ಮೇಲೀಗ ಅಮೆರಿಕ ಕೆಂಗಣ್ಣು ಬೀರುತ್ತಿದೆ. ಅದಕ್ಕೆ ಕಾರಣ, ಮತ್ತೊಂದು ಬಾರಿ ಚೀನಾದ ಡಬಲ್ ಗೇಮ್. ಉ.ಕೊರಿಯಾಗೆ ಒಳಗೊಳಗೇ ಬೆಂಬಲ ಕೊಡುತ್ತಿರುವ ಚೀನಾ, ಯುದ್ಧದ ಕೋಲಾಹಲ ಸೃಷ್ಟಿಸುತ್ತಿದೆ.  3ನೇ ಮಹಾಯುದ್ಧಕ್ಕೆ  ಮುನ್ನುಡಿ ಬರೆಯುತ್ತಾ ಡ್ರ್ಯಾಗನ್..? ಅಂಥಾದ್ದೊಂದು ಭೀತಿಗೆ ಕಾರಣವಾಗಿರೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿರುವ ಹೇಳಿಕೆ.

ಚೀನಾ ಡಬಲ್​ ಗೇಮ್​ 

ಚೀನಾದಿಂದ ತುಂಬಾನೇ ನಿರಾಸೆಯಾಗಿದೆ. ನಮ್ಮ ಹಳೆಯ ಮೂರ್ಖ ನಾಯಕರು ಅವರಿಗೆ ಬಿಲಿಯನ್ ಬಿಲಿಯನ್ ಡಾಲರ್ ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟರು. ಆದರೆ, ಅವರು ಉತ್ತರ ಕೊರಿಯಾ ವಿಚಾರದಲ್ಲಿ ನಮಗೆ ಸ್ವಲ್ಪವೂ ಸಹಕರಿಸುತ್ತಿಲ್ಲ. ಅವರು ಮನಸ್ಸು ಮಾಡಿದರೆ, ಸಮಸ್ಯೆಯನ್ನು ಬಹಳ ಸುಲಭವಾಗಿ ಬಗೆಹರಿಸಬಹುದು. ಆದರೆ, ಕೇವಲ ಮಾತನಾಡುತ್ತಿದ್ದಾರೆ. ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದಿಲ್ಲ.

ಚೀನಾಗೆ ಇಂಥಾದ್ದೊಂದು ಎಚ್ಚರಿಕೆ ಕೊಟ್ಟಿರುವುದು ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅದಕ್ಕೆ ಕಾರಣ ಉತ್ತರ ಕೊರಿಯಾ. ಚೀನಾಗೆ ನೇರವಾಗಿ ಇಂಥಾದ್ದೊಂದು ಬಹಿರಂಗ ಎಚ್ಚರಿಕೆ ಕೊಡುವ ಕೆಲಸವನ್ನು ಇದುವರೆಗೆ ಯಾವುದೇ ದೇಶ ಮಾಡಿರಲಿಲ್ಲ. ಅಂಥಾದ್ದೊಂದು ಧೈರ್ಯ ತೋರಿದೆ ಅಮೆರಿಕ.

ಚೀನಾ ಮೇಲೆ ಟ್ರಂಪ್​ ಸಿಟ್ಟು!

ಚೀನಾದ ಮೇಡ್ ಇನ್ ಚೀನಾ ವಸ್ತುಗಳ ಆತಂಕ, ಕೇವಲ ಭಾರತವನ್ನು ಕಾಡುತ್ತಿಲ್ಲ. ಅದು ಅಮೆರಿಕಕ್ಕೂ ಅಪಾಯದ ಕರೆಗಂಟೆ ಹೊಡೆಯುತ್ತಿದೆ. ಹೀಗಾಗಿಯೇ ಅಧ್ಯಕ್ಷರಾದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೇಡ್ ಇನ್ ಅಮೆರಿಕ ಘೋಷಣೆ ಮೊಳಗಿಸಿದ್ದರು. ಅಷ್ಟೇ ಅಲ್ಲ, ಮೇಡ್ ಇನ್ ಅಮೆರಿಕ ವೀಕ್ ಎಂದು ಘೋಷಿಸಿ, ಜನಜಾಗೃತಿ ಮೂಡಿಸಿದ್ದರು. ಅದು ಚೀನಾ ವಿರುದ್ಧ ಅಮೆರಿಕ ಬಿಟ್ಟಿದ್ದ ಮೊತ್ತ ಮೊದಲ ಬ್ಯುಸಿನೆಸ್ ಬ್ರಹ್ಮಾಸ್ತ್ರ.

ಕಳೆದ ವರ್ಷ ಚೀನಾ, ಉತ್ತರ ಕೊರಿಯಾ ಜತೆ 309 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತದ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಕಿಡಿ ಕಾರುತ್ತಲೇ ಉತ್ತರ ಕೊರಿಯಾದ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಅಷ್ಟೇ ಅಲ್ಲ ಉತ್ತರ ಕೊರಿಯಾ ವಿಚಾರದಲ್ಲಿ ಚೀನಾಗೆ ಎಚ್ಚರಿಕೆ ಕೊಡುತ್ತಿರುವ ಅಮೆರಿಕ, ಯುದ್ಧದ ಸೂಚನೆಯನ್ನೂ ನೀಡಿದೆ.

ಈ ನಡುವೆ ಅಮೇರಿಕಾಗೆ ತಿರುಗೇಟು ನೀಡಿರುವ ಚೀನಾ ಯಾವುದೇ ಶತ್ರು ದೇಶವನ್ನು ಎದುರಿಸಲು ನಾವು ಸರ್ವ ಸನ್ನದ್ಧ ಎಂದಿದೆ.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!