ಮೈತ್ರಿ ಸರ್ಕಾರಕ್ಕೆ ಕುತ್ತು ಬರುತ್ತಾ ಕಾಂಗ್ರೆಸ್-ಬಿಜೆಪಿ ನಾಯಕರ ಬೀಗತನ..?

By Web DeskFirst Published Sep 11, 2018, 1:45 PM IST
Highlights

* ರಾಜ್ಯ ಮೈತ್ರಿ ಸರ್ಕಾರವನ್ನ ಉರುಳಿಸಲು ಶ್ರೀರಾಮುಲು ಅವರಿಂದ ಮಾಸ್ಟರ್ ಪ್ಲ್ಯಾನ್.  
* ಜಾರಕಿಹೊಳಿ ಬ್ರದರ್ಸ್ ಅವರನ್ನ ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಿಸಿದ್ದು, ಇದಕ್ಕೆ ಶ್ರೀರಾಮುಲು ಅವರನ್ನ ಛೂ ಬಿಟ್ಟಿದೆ.
* ಜಾರಕಿಜಹೊಳಿ ಮನೆತನಕ್ಕೆ ತಮ್ಮ ಮಗಳನ್ನ ಧಾರೆ ಎರೆದು ಮೈತ್ರಿ ಸರ್ಕಾರವನ್ನ ಉರುಳಿಸುವ ಐಡಿಯಾಲಾಜಿಯಲ್ಲಿ ರಾಮುಲು.
* ಒಟ್ಟಿನಲ್ಲಿ ಶತಾಯಗತಾಯವಾಗಿ ಜಾರಕಿಹೊಳಿ ಬ್ರದರ್ಸ್ ಅನ್ನು ಪಕ್ಷಕ್ಕೆ ಸೆಳೆಯಲು ಬೀಗತನ ಅಸ್ತ್ರವನ್ನ ಪ್ರಯೋಗಿಸಿದೆ.
 

ಬೆಂಗಳೂರು, (ಸೆ.11): ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಸಂಗತಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನ ಮೂಡಿಸುತ್ತಿದೆ.  ಅದರಲ್ಲೂ ಬೆಳಗಾವಿಯ ರಾಜಕಾರಣ ಮೈತ್ರಿ ಸರ್ಕಾರವನ್ನ ನಿದ್ದೆಗೆಡಿಸಿದೆ. ಶಾಸಕಿ ಲಕ್ಷ್ಮೀ  ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಶೀತಲ ಸಮರ ಮುಖ್ಯಮಂತ್ರಿಯ ಕುರ್ಚಿ ಅಲುಗಾಡತೊಡಗಿದೆ. 

ಇದನ್ನು ಓದಿ ಮೈತ್ರಿ ಸರ್ಕಾರ ಉರುಳಿಸಲು ಎಲ್ಲರಿಗಿಂತ ಇವರಿಗೆ ಹೆಚ್ಚು ಉತ್ಸಾಹವಂತೆ!

ಇದಕ್ಕೆ ಪೂರಕವೆಂಬಂತೆ ಬೆಳಗಾವಿ ಪಿಎಲ್’ಡಿ ಬ್ಯಾಂಕ್ ಚುನಾವಣೆ ನಂತರ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಒಳ ಒಳಗೆ ಸರ್ಕಾರವನ್ನ ಕೆಡವಲು ಪ್ಲ್ಯಾನ್ ಕುದುರಿಸಿದ್ದಾರೆ ಎನ್ನುವ ಮಾತುಗಳು ಸದ್ಯ ರಾಜಕೀಯ ವಲಯದಲ್ಲಿ ಬಾರೀ ಚರ್ಚೆಯಾಗುತ್ತಿದೆ. ಇತ್ತ ಬಿಜೆಪಿ ಸಹ ಸರ್ಕಾರವನ್ನ ಬೀಳಿಸಲು ಅಪರೇಷನ್ ಕಮಲದ ಜೊತೆಗೆ ಬೇರೆ ಹೊಸ ಅಸ್ತ್ರವನ್ನ ಪ್ರಯೋಗಿಸಿದೆ. ಅದೇನಪ್ಪ ಅಂದ್ರೆ, ಜಾರಕಿಹೊಳಿ ಕುಟುಂಬದ ಜೊತೆ ಸಂಬಂಧ ಬೆಳೆಸಲು ಶಾಸಕ ಶ್ರೀರಾಮುಲುಗೆ ಬಿಜೆಪಿ ಟಾಸ್ಕ್ ನೀಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ರಾಮುಲು ಸಹ  ಸದ್ದಿಲ್ಲದೆ ಜಾರಕಿಹೊಳಿ ಕುಟುಂಬದ
ಜೊತೆ ನೆಂಟಸ್ಥನ ಬೆಳೆಸಲು ಆಸಕ್ತಿ ತೋರಿದ್ದಾರೆ ಎನ್ನಲಾಗ್ತಿದೆ.

ಇದನ್ನು ಓದಿ ಸಿಎಂ, ಡಿಸಿಎಂ ಮತ್ತು ಮದುವೆ: ರಮೇಶ್, ಶ್ರೀರಾಮುಲು ಪ್ಲ್ಯಾನ್ ಏನು?

ಜಾರಕಿಹೊಳೆ ಮನೆತನಕ್ಕೆ ಶ್ರೀರಾಮುಲು ತಮ್ಮ ಮಗಳನ್ನ ಧಾರೆ ಎರೆಯಲು ಮನಸ್ಸು ಮಾಡಿದ್ದು, ಈ ಮೂಲಕ ಮೈತ್ರಿ ಸರ್ಕಾರವನ್ನ ಬೀಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ತಮ್ಮದೇಯಾದ ವರ್ಚಸ್ಸು ಇಟ್ಟುಕೊಂಡಿದ್ದರಿಂದ ಹತ್ತಾರು ಶಾಸಕರು ಇವರ ಕೈಯಲ್ಲಿದ್ದಾರೆ.  ಇದ್ರಿಂದ ಮೈತ್ರಿ ಸರ್ಕಾರವನ್ನ ಉರುಳಿಸುವುದು ಸುಲಭವಾಗುತ್ತದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಗೂ ಸಹ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವುದನ್ನ ಬಿಜೆಪಿ ಮನಗಂಡಿದೆ. ಈ ಹಿನ್ನೆಲೆಯಲ್ಲಿ ಶತಾಯಗತಾಯವಾಗಿ ಜಾರಕಿಹೊಳಿ ಬ್ರದರ್ಸ್ ಅವರನ್ನ  ಪಕ್ಷಕ್ಕೆ ಸೆಳೆಯಲು ಬಿಜೆಪಿ ನಾನಾ ಕಸರತ್ತು ನಡೆಸಿರುವುದರಂತೂ  ಸತ್ಯ. ಒಂದು ವೇಳೆ ಜಾರಕಿಹೊಳಿ ಹಾಗೂ ಶ್ರೀರಾಮುಲು ಬೀಗತನ ಮೈತ್ರಿ ಸರ್ಕಾರವನ್ನ ಬಲಿ ಪಡೆದರೂ ಆಶ್ಚರ್ಯ ಪಡಬೇಕಿಲ್ಲ.

click me!