
ಚೆನ್ನೈ(ಅ.20): ತಮಿಳ್ನಾಡು ಸಿಎಂ ಜಯಲಲಿತಾ ಆಸ್ಪತ್ರೆ ಸೇರಿ 30 ದಿನಗಳಾಗಿವೆ. ಆದರೂ ಎಐಡಿಎಂಕೆಯಲ್ಲಿ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಸಿಕ್ಕಿಲ್ಲ ಉತ್ತರ. ಈ ಮಧ್ಯೆ ಡಿಎಂಕೆ ನಾಯಕ ಕರುಣಾನಿಧಿ ಪಕ್ಷದ ಉತ್ತರಾಧಿಕಾರಿ ಹೆಸರನ್ನ ಆಧಿಕೃತವಾಗಿ ಘೋಷಿಸಿದ್ದಾರೆ. ಉತ್ತರಾಧಿಕಾರಿಯಾಗಿ ಕಿರಿಯ ಪುತ್ರ ಸ್ಟಾಲೀನ್ ಅವರನ್ನ ನೇಮಕ ಮಾಡಿದ್ದಾರೆ.ಈ ಮೂಲಕ ಪಕ್ಷದ ಅಧಿಕಾರವನ್ನ ಸ್ಟಾಲೀನ್ಗೆ ಇಂದು ಹಸ್ತಾಂತರಿಸಿದ್ದಾರೆ. 93 ವಯಸ್ಸಿನ ಕರುಣಾನಿಧಿಯವರು ಕಳೆದ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ವರಿಷ್ಠರಾಗಿ ಪಕ್ಷವನ್ನ ಮುನ್ನಡೆಸಿದ್ದರು. ಇದೀಗ ಡಿಎಂಕೆ ಪಕ್ಷದ ಜವಾಬ್ದಾರಿಯನ್ನ ಎರಡನೇ ಪುತ್ರ ಸ್ಟಾಲಿನ್ಗೆ ವಹಿಸಿ ಪಟ್ಟಾಭಿಷೇಕ ಮಾಡಲಾಗಿದೆ. ಈ ಹಿಂದೆಯೇ ಇದರ ಸುಳಿವು ಸಿಕ್ಕಿದ್ದ ಕಾರಣ ಹಿರಿಯ ಪುತ್ರ ಸಂಸದ ಅಳಗಿರಿ ಅಪ್ಪನ ವಿರುದ್ಧ ಸಿಟ್ಟಿಗೆದ್ದಿದ್ದರು. ಈ ಕಾರಣಕ್ಕೆ ಡಿಎಂಕೆ ಹೋಳಾಗುತ್ತಾ ಅನ್ನೋ ಮಾತುಗಳು ಕೇಳ್ ಬರ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.