
ನೂತನ ವರ್ಷದ ಖುಷಿಯಲ್ಲಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ವಾಹನ ಪರವಾನಗಿ, ಎಲ್ಎಲ್ಆರ್ ಪರವಾನಗಿ ಪಡೆಯಲು ಮೊದಲಿನ ದರಕ್ಕಿಂತ 6 ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ 2016ರ ಡಿ.29ರಿಂದ ಅನ್ವಯವಾಗುವಂತೆ ಪರಿಷ್ಕರಣೆಯ ಆದೇಶ ಹೊರಡಿಸಿದೆ.
ವಾಹನ ಚಾಲನ ತರಬೇತಿ ಶಾಲೆ ಆರಂಭಕ್ಕೆ ಬೇಕಾಗಿರುವ ಅನುಮತಿ, ಅಂತರರಾಷ್ಟ್ರೀಯ ಚಾಲನಾ ಪರವಾನಗಿ, ವಾಹನ ಮಾಲೀಕತ್ವದ ವರ್ಗಾವಣೆ, ವಿವಿಧ ವಾಹನಗಳ ನೋಂದಿಕರಣ ಹಾಗೂ ಅವುಗಳ ನವೀಕರಣ ಶುಲ್ಕದಲ್ಲಿ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ 6ಪಟ್ಟು ಹೆಚ್ಚಿಸಿದೆ. ಈ ಶುಲ್ಕವನ್ನು ರಾಜ್ಯ ಸರ್ಕಾರ ವಸೂಲಿ ಮಾಡಬಹುದು. ಆದರೆ ಕೇಂದ್ರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ದರ ವಿಧಿಸಬಾರದು ಎಂಬ ಸೂಚನೆ ನೀಡಲಾಗಿದೆ.
ಮೊದಲು ವಾಹನ ಪರವಾನಗಿ ಪಡೆಯಬೇಕಾದರೆ 35 ರೂ. ಪಾವತಿಸಬೇಕಿತ್ತು. ಈಗ 200 ರೂ. ಕಟ್ಟಬೇಕು. ಎಲ್ಎಲ್ ಪಡೆಯಲು 150 ಹಾಗೂ ಮರು ಪರೀಕ್ಷಾ ಶುಲ್ಕಕ್ಕೆ 50 ರೂ. ಪಾವತಿಸಬೇಕು. ಅಲ್ಲದೆ ಎಲ್ಲ ವಿಧದ ವಾಹನಗಳನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ.
--
ಶುಲ್ಕದ ವಿವರಗಳು
ಚಾಲನಾ ಪರವಾನಗಿ ಪತ್ರ (ಡಿಎಲ್) - 200 ರೂ.
ಕಲಿಕಾ ಪರವಾನಗಿ ಪತ್ರ (ಎಲ್ ಎಲ್ ಆರ್) - 150 ರೂ.
ಎಲ್ ಎಲ್ ಆರ್ ಪರೀಕ್ಷಾ ಶುಲ್ಕ - 50 ರೂ.
ಡಿಎಲ್ ಪರೀಕ್ಷಾ ಶುಲ್ಕ - 300 ರೂ.
ಸ್ಮಾರ್ಟ್ ಕಾರ್ಡ್ : 200 ರೂ.
ಡಿಎಲ್ ನವೀಕರಣ : 200 ರೂ.
ಅಂತರರಾಷ್ಟ್ರೀಯ ಡಿಎಲ್ - 1000 ರೂ.
ಅಪಾಯಕಾರಿ ಸರಕು ಸಾಗಿಸುವ ವಾಹನಗಳ ದೃಢೀಕರಣ ನವೀಕರಣ :100 ರೂ.
ನವೀಕರಣ ವಿಳಂಬವಾದರೆ ಪ್ರತಿವರ್ಷಕ್ಕೆ ದಂಡ - 1,000 ರೂ.
ವಾಹನ ಚಾಲನಾ ತರಬೇತಿ ಶಾಲೆಗಳ ಪರವಾನಗಿ - 10, 000 ರೂ.
ವಾಹನ ಚಾಲನಾ ತರಬೇತಿ ಶಾಲೆಗಳ ಪರವಾನಗಿ ತರಬೇತಿ ಶಾಲೆಗಳ ಪರವಾನಗಿ ನಕಲುಪ್ರತಿ - 5000 ರೂ.
ಪರವಾನಗಿ ವಿತರಣಾ ಸಂಸ್ಥೆಗಳ ವಿರುದ್ಧ ಮೇಲ್ಮನವಿ ಸಲ್ಲಿಸುವಿಕೆ: 500 ರೂ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.