
ಬಿಡದಿ(ಆ.02): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿವಿಧಕಡೆಯಿರುವ ಸ್ವತ್ತುಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಗದು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರೂ ಆಗಿರುವ ಸಹೋದರ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ.ಸುರೇಶ್:
'ಬೆಳಗ್ಗಿನಿಂದ ಐಟಿ ದಾಳಿ ನಡೆದಿದೆ.ನಮ್ಮ ಸಹೋದರ ಸಂಬಂಧಿಗಳ ಮನೆ ಮೇಲೆ ಕೂಡಾ ಈ ದಾಳಿ ಆಗಿದೆ. ನಮ್ಮ ಆಸ್ತಿ ವ್ಯವಹಾರಗಳ ಎಲ್ಲಾ ದಾಖಲೆಗಳನ್ನ ನಾವು ಚುನಾವಣಾ ಆಯೋಗ ಹಾಗೂ ಲೋಕಾಯುಕ್ತಕ್ಕೂ ನೀಡಿದ್ದೇವೆ. ಐಟಿ ದಾಳಿ ರಾಜಕೀಯ ಪ್ರೇರಿತ. ಆರ್ಥಿಕ ಇಲಾಖೆಗೆ ನಮ್ಮ ಆರ್ಥಿಕ ಲೆಕ್ಕಾಚಾರಗಳ ದಾಖಲೆ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ. ಕಾಂಗ್ರೆಸ್'ಗೆ ಹೊಡೆತ ನೀಡಲು ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವನ್ನ ಹಿಮ್ಮೆಟ್ಟಿಸಲು ಬಿಜೆಪಿ ಮಾಡಿರೋ ಹುನ್ನಾರವಿದು. ನನ್ನ ಸಹೋದರನನ್ನು ಮಾತನಾಡಿಸಲು ಐಟಿಯವರು ಬಿಡದಿರೋದು ಸರಿಯಾದ ಕ್ರಮವಲ್ಲ.
ನಾವು ಕಾನೂನಿನ ಚೌಕಟ್ಟಿನೊಳಗೆ ಎಲ್ಲವನ್ನೂ ಮಾಡುತ್ತಿದ್ದೇವೆ.ಎಲ್ಲಾ ಉತ್ತರವನ್ನು ನೀಡುತ್ತೇವೆ. ಐಟಿ ದಾಳಿ ಇನ್ನೂ ಮುಂದುವರೆಯಬಹುದು.ಗುಜರಾತ್ ಶಾಸಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಿಲ್ಲ.ಆದರೆ ನಮ್ಮ ರಕ್ಷಣೆಗೆ ಬಂದ ನಿಮಗೆ ಹೀಗಾಗಬಾರದಿತ್ತು ಅಂತ ಅವರು ಹೇಳಿದ್ದಾರೆ.ಐಟಿ ದಾಳಿ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದದ್ದು.ನಾವು ಕರ್ನಾಟಕ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಇದು ಪೂರ್ವ ನಿಯೋಜಿತ ದಾಳಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.