ಮೈತ್ರಿ ಸರ್ಕಾರ ಉಳಿಯಲ್ಲ..ಸದಾನಂದ ಗೌಡರೇನು ಜ್ಯೋತಿಷಿಯೇ!?

First Published Jul 8, 2018, 8:18 PM IST
Highlights

ಮೈತ್ರಿ ಸರಕಾರದ ಆಯಸ್ಸಿನ ವಿಚಾರ ಕೇಂದ್ರ ಸಚಿವ ಸದಾನಂದ ಗೌಡ ಮತ್ತುಜಲಸಂಪನ್ಮೂಲ ಸಚಿವ ಡಿ.ಕಡ.ಶಿವಕುಮಾರ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸದಾನಂದ ಗೌಡ ರ ಹೇಳಿಕೆಗೆ ಡಿಕೆಶಿ ಟಾಂಗ್ ನೀಡಿದ್ದಾರೆ.

ಮಂಗಳೂರು/ಹಾಸನ[ಜು.8]  ಯಾವುದೇ ಕ್ಷಣದಲ್ಲಾದರೂ ಮೈತ್ರಿ ಸರಕಾರ ಪತನವಾಗಬಹುದು ಎಂದು ಸದಾನಂದ ಗೌಡರು ಹೇಳಿದ್ದಕ್ಕೆ ಹಾಸನದಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿ, ರಾಜ್ಯದ ಜನರಿಗೂ ಸಹ ಈ ಸರಕಾರ ಬೇಕಿಲ್ಲ. ಜನಾದೇಶವಿಲ್ಲದೆ ಬಿಜೆಪಿಯನ್ನು ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್‌ -ಜೆಡಿಎಸ್‌ ನಾಯಕರ ನಡುವೆ ತೆರೆಮರೆಯಲ್ಲಿ ಕುರ್ಚಿಗಾಗಿ ಕಿತ್ತಾಟ, ಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ . ಅಭಿವೃದ್ಧಿ ಕಾರ್ಯವನ್ನು ಸರಕಾರ ಮರೆತಿದೆ ಎಂದು ಆರೋಪಿಸಿದ್ದರು.

ಗೌಡರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಸದಾನಂದಗೌಡ ಅದ್ಯಾವಾಗ ಜ್ಯೋತಿಷಿಯಾದ್ರೊ ಗೊತ್ತಿಲ್ಲ ಎಂಧು ಟಾಂಗ್ ನೀಡಿದರು.

ಸದಾನಂದಗೌಡರು ಬಹಳ ಸಂತೋಷವಾಗಿದ್ದಾರೆ ಅವರು ಆನಂದವಾಗಿರಲಿ. ರಾಜ್ಯದಲ್ಲಿ ವಿರೋಧ ಪಕ್ಷ‌ ಮಲಗಿದೆ ಅವರು‌ ಮೊದಲು ಎಚ್ಚರವಾಗಲಿ,  ನಮ್ಮ ಡ್ಯೂಟಿ ನಾವು ಮಾಡುತ್ತಿದ್ದೇವೆ ಎಂದರು.

ಬಜೆಟ್ ಬಗ್ಗೆ ಕೇವಲ ರಾಜಕೀಯ ದ‌ಕಾರಣದಿಂದ ಟೀಕೆ. ರಾಜ್ಯ ಬಜೆಟ್ ಅತ್ಯಂತ ಶಕ್ತಿ ಶಾಲಿಯಾಗಿದೆ. ಇದು ಎಲ್ಲಾ ವರ್ಗದ ಜನರಿಗೆ ಬಜೆಟ್ ನಲ್ಲಿ ಅನುಕೂಲವಾಗಿದೆ. ಸಾಲಾ ಮನ್ನಾ ಕೇವಲ ಕೆಲವು ಜಿಲ್ಲೆಗೆ ಸೀಮಿತವಾಗಿಲ್ಲ ಎಂದು ಸಮರ್ಥಿಸಿಕೊಂಡರು.

 

click me!