ಜನತೆಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲನಾಗಿರುವುದರಿಂದ ರಾಜೀನಾಮೆ ನೀಡುತ್ತೇನೆ: ಸಂಸದ ದಿವಾಕರ್‌ ರೆಡ್ಡಿ

Published : Sep 22, 2017, 12:56 PM ISTUpdated : Apr 11, 2018, 12:57 PM IST
ಜನತೆಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲನಾಗಿರುವುದರಿಂದ ರಾಜೀನಾಮೆ ನೀಡುತ್ತೇನೆ: ಸಂಸದ ದಿವಾಕರ್‌ ರೆಡ್ಡಿ

ಸಾರಾಂಶ

ಆಂಧ್ರ ಪ್ರದೇಶದ ಅನಂತಪುರಂ ಕ್ಷೇತ್ರದ ಸಂಸದ, ಟಿಡಿಪಿ ನಾಯಕ ಜೆ.ಸಿ. ದಿವಾಕರ್‌ ರೆಡ್ಡಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕ್ಷೇತ್ರದ ಜನತೆಗೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ದಿವಾಕರ್‌ ರೆಡ್ಡಿ ಹೇಳಿದ್ದಾರೆ.

ಅನಂತಪುರ(ಸೆ.22): ಆಂಧ್ರ ಪ್ರದೇಶದ ಅನಂತಪುರಂ ಕ್ಷೇತ್ರದ ಸಂಸದ, ಟಿಡಿಪಿ ನಾಯಕ ಜೆ.ಸಿ. ದಿವಾಕರ್‌ ರೆಡ್ಡಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕ್ಷೇತ್ರದ ಜನತೆಗೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ದಿವಾಕರ್‌ ರೆಡ್ಡಿ ಹೇಳಿದ್ದಾರೆ.

ಅನಂತಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿದ ರೆಡ್ಡಿ, ನನ್ನನ್ನು ನಂಬಿ ಮತ ಹಾಕಿದ ಜನತೆಗೆ ಸಂಸದನಾಗಿ ನ್ಯಾಯ ಒದಗಿಸಲು ವಿಫಲವಾಗಿದ್ದೇನೆ. ಆದ್ದರಿಂದ ನಾನು ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.  ಒಬ್ಬ ಜನ ಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ನಿರ್ಮಲೀಕರಣ ಹಾಗೂ ರಸ್ತೆಯ ಅಗಲೀಕರಣ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಚುನಾವಣೆ ವೇಳೆ ನಾನು ನೀಡಿದ್ದ ಎಲ್ಲರಿಗೂ ಕುಡಿಯುವ ನೀರು ಸರಬರಾಜು ಹಾಗೂ ಚಾಗಲ್ಲು ಜಲಾಶಯದಿಂದ ನೀರಾವರಿಗೆ ನೀರು ಹರಿಸುವ ಭರವಸೆಯನ್ನೂ ಈಡೇರಿಸಲಾಗಿಲ್ಲ ಎಂದು ದಿವಾಕರ್‌ ರೆಡ್ಡಿ ಹೇಳಿದ್ದಾರೆ.

ಇದೇ 25 ಅಥವಾ 26ರಂದು ಲೋಕಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸುತ್ತೇನೆ. ಸಂಸದ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡುತ್ತೇನೆ. ಟಿಡಿಪಿ ಪಕ್ಷದಲ್ಲೇ ಮುಂದುವರಿಯುತ್ತೇನೆ ಎಂದು ದಿವಾಕರ ರೆಡ್ಡಿ ಸ್ಪಪ್ಟಪಡಿಸಿದ್ದಾರೆ. ಇನ್ನು, ಕಳೆದ ಜೂನ್‌ನಲ್ಲಿ ವಿಮಾನದಲ್ಲಿ ಅನುಚಿತ ವರ್ತನೆ ತೋರಿದ ಆರೋಪ ಮೇಲೆ ದಿವಾಕರ್‌ ರೆಡ್ಡಿ ದೇಶದ ಗಮನ ಸೆಳೆದಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ