ಒಂದೇ ದಿನದಲ್ಲಿ ಅನರ್ಹ ಶಾಸಕರಿಗೆ ಎರಡೆರಡು ಶಾಕ್, ಬೈ ಎಲೆಕ್ಷನ್ ಡೇಟ್ ಪ್ರಕಟಿಸುವಂತೆ ಪತ್ರ

Published : Sep 17, 2019, 08:07 PM IST
ಒಂದೇ ದಿನದಲ್ಲಿ ಅನರ್ಹ ಶಾಸಕರಿಗೆ ಎರಡೆರಡು ಶಾಕ್, ಬೈ ಎಲೆಕ್ಷನ್ ಡೇಟ್ ಪ್ರಕಟಿಸುವಂತೆ ಪತ್ರ

ಸಾರಾಂಶ

ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​ ಎದುರಾಗಿದೆ. 

ನವದೆಹಲಿ/ಬೆಂಗಳೂರು, [ಸೆ.17]: ಕಳೆದ ಒಂದೂವರೆ ತಿಂಗಳಿಂದ ವಿಚಾರಣೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ 17 ಅನರ್ಹ ಶಾಸಕರಿಗೆ ಇಂದು ಕೂಡ ಸುಪ್ರೀಂ ಕೋರ್ಟ್ ನಿರಾಸೆ ಮೂಡಿಸಿದೆ. 

ಮಂಗಳವಾರ ಬೆಳಗ್ಗೆ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್​ ವಿಚಾರಣೆಯನ್ನು ಮುಂದೂಡಿದೆ. ಇದರ ಬೆನ್ನಲ್ಲೇ ರಾಜ್ಯದ ವಿಧಾನಸಭಾ ಕಾರ್ಯಾಲಯ ಅನರ್ಹರಿಗೆ ಮತ್ತೊಂದು ಶಾಕ್​ ನೀಡಿದೆ.

ಸ್ಪೀಕರ್ ಅನರ್ಹತೆ ತೀರ್ಪಿನಿಂದ ಹೊಸ ವಿವಾದ

ದೋಸ್ತಿ ಸರ್ಕಾರದ 17 ಶಾಸಕರ ಅನರ್ಹತೆ  ಪ್ರಶ್ನಿಸಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅದು ಇಂದು [ಮಂಗಳವಾರ] ಆರಂಭವಾಗಬೇಕಿದ್ದ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಸೋಮವಾರಕ್ಕೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾ. ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು.  ಅನರ್ಹ ಶಾಸಕ ಬಿ.ಸಿ. ಪಾಟೀಲ್ ಮತ್ತು ನ್ಯಾ.ಶಾಂತನಗೌಡರ್ ಒಂದೇ ಜಿಲ್ಲೆಯವರಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದಿದ್ದಾರೆ. 

ಇದರ ಬೆನ್ನಲ್ಲೇ ಕೊನೆಯ ವಾರವಷ್ಟೇ ಪತ್ರ ಬರೆದಿದ್ದ ವಿಧಾನಸಭಾ ಕಾರ್ಯಾಲಯ ಇದೀಗ ಮತ್ತೊಂದು ಪತ್ರವನ್ನು ರಾಜ್ಯಪಾಲರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ.

 ಜುಲೈ 25ಕ್ಕೆ ಶಾಸಕರು ಅನರ್ಹಗೊಂಡಿದ್ದು, ಜನವರಿ 25ರ ಒಳಗೆ ಆ ಸ್ಥಾನಗಳನ್ನು ತುಂಬಬೇಕು. ಹೀಗಾಗಿ ಚುನಾವಣಾ ನೋಟಿಫಿಕೇಷನ್ ಹೊರಡಿಸುವಂತೆ ಸಲಹಾ ಪತ್ರ ನೀಡಿದೆ. 

ವಿಧಾನಸಭಾ ಕಾರ್ಯಾಲಯದ ಪತ್ರವನ್ನ ಆಯೋಗ ಪರಿಗಣಿಸಿದ್ರೆ, 1 ತಿಂಗಳಲ್ಲೇ 17 ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.  ಇದರಿಂದ ಅನರ್ಹ ಶಾಸಕರ ಎದೆ ಬಡಿತ ಹೆಚ್ಚಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ಬೊಲೆರೊ ಮೇಲೆ ಉರುಳಿಬಿದ್ದ ಹುಲ್ಲಿನ ಟ್ರಕ್; ಮೃತ ಚಾಲಕನ ವಿವರ ರಿವೀಲ್ ಮಾಡಿದ ಸರ್ಕಾರ!
ಹೊಸ ವರ್ಷದ ಸಂಭ್ರಮಕ್ಕೆ ಎಂಜಿ ರಸ್ತೆಯಲ್ಲಿ ಸಂಚಾರ ಭಾರೀ ಬದಲು, ಇಲ್ಲಿದೆ ವಿವರ!