ಸಭಾಪತಿ ಸ್ಥಾನ ಬೇಡವೆನ್ನುವೆ : ಬಸವರಾಜ ಹೊರಟ್ಟಿ

First Published Jun 12, 2018, 7:49 AM IST
Highlights

ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಿದ ಬಗ್ಗೆ ಬೇಸರವಿದೆ. ಶಿಕ್ಷಣ ಸಚಿವನಾಗಬೇಕೆಂಬ ಆಸೆ ಇತ್ತು. ಆದರೂ ನಮ್ಮ  ನಾಯಕರ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಬೆಳಗಾವಿ: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಿದ ಬಗ್ಗೆ ಬೇಸರವಿದೆ. ಶಿಕ್ಷಣ ಸಚಿವನಾಗಬೇಕೆಂಬ ಆಸೆ ಇತ್ತು. ಆದರೂ ನಮ್ಮ  ನಾಯಕರ ನಿರ್ಧಾರಕ್ಕೆ ಬದ್ಧನಿದ್ದೇನೆ. ಹಾಗಂತ ಕೈಕಟ್ಟಿ ಕೂರುವ ಸಭಾಪತಿ ಸ್ಥಾನ ನೀಡಿದರೆ ಒಪ್ಪುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ನನಗೆ ಸಭಾಪತಿ ಹುದ್ದೆ ನೀಡುವ ಬಗ್ಗೆ ಕಾರ‌್ಯಕರ್ತರ ಎದುರು ಹೇಳಿಕೊಂಡಿದ್ದಾರೆ. ಆದರೆ ನನಗೆ ಕೈಕಟ್ಟಿ ಕುಳಿತುಕೊಳ್ಳುವ ಸಭಾಪತಿ ಸ್ಥಾನ ಬೇಕಿಲ್ಲ. ಇದರಿಂದ ಸಮಾಜಕ್ಕೆ ಏನೂ ಕೊಡಲಾಗದು ಎಂದರು.

click me!