ಎಂ.ಜಿ ರಸ್ತೆಯಲ್ಲಿ ಯುವಕ-ಯುವತಿಯರಿಗೆ ಪ್ರತ್ಯೇಕ ಪಥ

By Suvarna Web DeskFirst Published Dec 26, 2017, 10:50 AM IST
Highlights

ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ನಡೆದ ಘಟನೆಯಿಂದ ಎಚ್ಚೆತ್ತಿರುವ ನಗರ ಪೊಲೀಸರು ಈ ಬಾರಿ ಯುವತಿಯರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಪಥ ಕಲ್ಪಿಸಲು ಸಿದ್ಧತೆ ನಡೆಸಿದ್ದಾರೆ. ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರ ಮಾಚರಣೆಗೆ ಸಾವಿರಾರು ಮಂದಿ ಯುವ ಸಮೂಹ ಬರುತ್ತದೆ.

ಬೆಂಗಳೂರು (ಡಿ.26): ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ನಡೆದ ಘಟನೆಯಿಂದ ಎಚ್ಚೆತ್ತಿರುವ ನಗರ ಪೊಲೀಸರು ಈ ಬಾರಿ ಯುವತಿಯರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಪಥ ಕಲ್ಪಿಸಲು ಸಿದ್ಧತೆ ನಡೆಸಿದ್ದಾರೆ. ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರ ಮಾಚರಣೆಗೆ ಸಾವಿರಾರು ಮಂದಿ ಯುವ ಸಮೂಹ ಬರುತ್ತದೆ.

ಈ ವೇಳೆ ಯುವತಿಯರು ಮತ್ತು ಮಹಿಳೆಯರ ರಕ್ಷಣೆಗೆಂದು ಪ್ರತ್ಯೇಕ ಪಥ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್‌ಸ್ಟ್ರೀಟ್‌ನಲ್ಲಿ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಈ ರಸ್ತೆಗಳ ಮಧ್ಯೆ ಬ್ಯಾರಿಕೇಡ್‌ಗಳನ್ನು ಹಾಕಿ ಎರಡು ಪಥಗಳನ್ನು ನಿರ್ಮಿಸಲಾಗುತ್ತದೆ. ಶೇ.70ರಷ್ಟು ಸ್ಥಳದಲ್ಲಿ ಪುರುಷರು ಹಾಗೂ ಶೇ.30ರಷ್ಟು ಸ್ಧಳದಲ್ಲಿ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಒಂದು ವೇಳೆ ಮಹಿಳೆ ಅಥವಾ ಯುವತಿ, ತಮ್ಮ ಪತಿ ಅಥವಾ ಬಾಯ್

ಫ್ರೆಂಡ್ ಜತೆ ಬಂದು ತಮ್ಮ ಕುಟುಂಬಸ್ಥರ ಜತೆಯೇ ಹೋಗು ತ್ತೇವೆ ಎಂದರೆ ಅಂತಹ ಯುವತಿಯರನ್ನು ಅವರ ಸುಪರ್ದಿಯಲ್ಲಿಯೇ ಕಳುಹಿಸಿ ಕೊಡಲಾಗುವುದು. ಇಲ್ಲದಿದ್ದರೆ ಪ್ರತ್ಯೇಕವಾಗಿ ಕಳುಹಿಸಲಾ ಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ 12 ಅಡಿ ಎತ್ತರದ 15 ವೀಕ್ಷಣಾ ಗೋಪುರಗಳು(ವಾಚ್ ಟವರ್), 500 ಸಿಸಿಟೀವಿ ಕ್ಯಾಮೆರಾ ಗಳು ಹಾಗೂ 200 ಫೋಕಲ್ ಲೈಟ್‌ಗಳ ಅಳವಡಿಕೆ ಮಾಡಲಾ ಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು.

ಕಳೆದ ವರ್ಷ ಯುವತಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ, ಬೆಂಗಳೂರಿನ ಮಾರ್ಯದೆ ಹಾಳಾಗಿತ್ತು. ಹೀಗಾಗಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹಾಗೂ ಚರ್ಚ್‌ಸ್ಟ್ರೀಟ್‌ನಲ್ಲಿ ಪುರುಷರು ಮತ್ತು ಮಹಿಳೆಯರ ಓಡಾಟಕ್ಕೆ ಪ್ರತ್ಯೇಕ ಪಥ ಮಾಡಲು ಸಿದ್ಧತೆ ನಡೆದಿದೆ. ಹೊಸ ಮಾದರಿಯ ಭದ್ರತೆಗೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ ನಂತರವೇ ಅನುಷ್ಠಾನಕ್ಕೆ ತರಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

click me!