
ಬೆಂಗಳೂರು (ನ.28): ನಟಿ ಸಂಯುಕ್ತಾ ಹೆಗಡೆಯಿಂದ ರೋಸಿ ಹೋದ ನಿರ್ಮಾಪಕ ಪದ್ಮನಾಭ್ ‘ಕಾಲೇಜ್ ಕುಮಾರ್’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಯುಕ್ತಾ ಹೆಗಡೆಗೆ ಯಾರೂ ಸಪೋರ್ಟ್ ಮಾಡಬೇಡಿ. ಸಪೋರ್ಟ್ ಮಾಡಿದರೆ ನಿರ್ಮಾಪಕರಿಗೆ ಖಂಡಿತ ತೊಂದರೆಯಾಗುತ್ತದೆ ಎಂದು ಪದ್ಮನಾಭ್ ಹೇಳಿದ್ದಾರೆ. ಸಂಯುಕ್ತಾ ವಿರುದ್ಧ ದೂರು ಕೊಡಲು ಪದ್ಮನಾಭ್ ನಿರ್ಧಾರಿಸಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಸಂಯುಕ್ತಾ ಹೆಗಡೆ ಮಾಡಿರುವ ಕಿರಿಕ್'ಗಳನ್ನ ಕಾಲೇಜ್ ಕುಮಾರ್ ಚಿತ್ರದ ನಿರ್ಮಾಪಕ ಪದ್ಮನಾಭ್ ಹೊರ ಹಾಕಿದ್ದಾರೆ. ಚಿತ್ರದ ಆರಂಭದ ದಿನಗಳಿಂದಲೂ ಸಂಯುಕ್ತಾ ಸಪೋರ್ಟ್ ಮಾಡಿಯೇ ಇಲ್ಲ. ಚಿತ್ರ ರಿಲೀಸ್ ಆದಮೇಲೂ ಪ್ರಚಾರಕ್ಕೆ ಬಂದಿಲ್ಲ. ಚಿತ್ರ ಕೇವಲ ಒಬ್ಬರಿಂದಲೇ ಆಗೋದಿಲ್ಲ. ಅದಕ್ಕೆ ಎಲ್ಲರ ಸಪೋರ್ಟ್ ಬೇಕು.ಸಂಯುಕ್ತಾ ಹೆಗಡೆ ಅದನ್ನ ಮಾಡಿಯೇ ಇಲ್ಲ. ಮಾಧ್ಯಮದವರು ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ,ನಿರ್ಮಾಪಕ ಸಂಘ ಇಂತಹ ಕಲಾವಿದರಿಗೆ ಸಪೋರ್ಟ್ ಮಾಡಲೇಬಾರದು. ಇವರನ್ನ ಹಾಕಿಕೊಂಡು ಸಿನಿಮಾ ಮಾಡುವ ನಿರ್ಮಾಪಕರಿಗೆ ಖಂಡಿತ ತೊಂದರೆ ಆಗುತ್ತದೆ. ಹಾಗಾಗಿಯೇ ಈಗ ಸಯುಂಕ್ತಾ ವಿರುದ್ಧ ಫಿಲ್ಮಂ ಚೇಂಬರ್ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ಕೊಡುವುದಾಗಿ ಹೇಳಿದ್ದಾರೆ.
ಸಂಯುಕ್ತರನ್ನು ಹಾಕಿಕೊಂಡು ಸಿನಿಮಾ ಮಾಡುವವರಿಗೆ ತೊಂದರೆ ಆಗಲೇಬಾರದು ಅನ್ನುವ ಕಾರಣಕ್ಕಾಗಿ ದೂರು ಕೊಡುತ್ತಿರುವುದಾಗಿ ಪದ್ಮನಾಭ್ ಸ್ಪಷ್ಟಪಡಿಸಿದ್ದಾರೆ. ತಮ್ಮ 'ಕಾಲೇಜ್ ಕುಮಾರ್' ಚಿತ್ರದ ಯಶಸ್ವಿ ಪ್ರೆಸ್ ಮೀಟ್ನಲ್ಲಿಯೇ ಪದ್ಮನಾಭ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.