ನೋಟ್ ಬ್ಯಾನ್ ಆದ ಬಳಿಕ ಟಾಟಾ, ಬಿರ್ಲಾಗಳಿಗೆ ನಷ್ಟವಾಗಿದೆಯಾ? ಲಾಭವಾಗಿದ್ದು ಯಾರಿಗೆ?

By Suvarna Web DeskFirst Published Nov 23, 2016, 9:16 AM IST
Highlights

ಕ್ಯಾಷ್ ವಹಿವಾಟಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಶ್ರೀರಾಮ್ ಚಿಟ್ಸ್ ಕಂಪನಿ ಶೇಕಡಾವಾರು ಲೆಕ್ಕದಲ್ಲಿ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗಿದೆ. ಗುಜರಾತ್'ನ ಉದ್ಯಮಿ ಅದಾನಿಯವರ ಸಂಸ್ಥೆಯೂ ನಷ್ಟ ಅನುಭವಿಸಿದೆ.

ನವದೆಹಲಿ(ನ. 23): ನ. 8ರಂದು ಕೇಂದ್ರ ಸರಕಾರ ನೋಟ್ ರದ್ದು ಮಾಡಿದಂದಿನಿಂದ ಭಾರತದ ಸೆನ್ಸೆಕ್ಸ್ ಏಳು ಪ್ರತಿಶತದಷ್ಟು ಕುಸಿತ ಕಂಡಿದೆ. ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಅಂದಾಜು 100 ಕೋಟಿ ಡಾಲರ್ (ಸುಮಾರು 7 ಸಾವಿರ ಕೋಟಿ ರೂ.) ನಷ್ಟ ಅನುಭವಿಸಿವೆ. ಷೇರು ಮಾರುಕಟ್ಟೆಯಲ್ಲಿ ಭಾರತೀಯ ಸಂಸ್ಥೆಗಳು 62 ಸಾವಿರ ಕೋಟಿ ರೂ ಮೌಲ್ಯ ಕಳೆದುಕೊಂಡಿವೆ. ಟಾಟಾ, ಬಿರ್ಲಾ, ಮಹೀಂದ್ರಾ ಮೊದಲಾದ ಸಂಸ್ಥೆಗಳಿಗೆ ಹೆಚ್ಚು ಹೊಡೆತ ಬಿದ್ದಿದೆ. ಇದ್ದುದ್ದರಲ್ಲಿ ಅಂಬಾನಿ ಒಡೆತನದ ರಿಲಾಯನ್ಸ್ ಮೊದಲಾದ ಕೆಲವೇ ಸಂಸ್ಥೆಗಳು ಸ್ವಲ್ಪಮಟ್ಟಿಗೆ ಬಚಾವ್ ಆಗಿವೆ ಎಂಬಂತಹ ಮಾಹಿತಿಯನ್ನು ಎಕನಾಮಿಕ್ ಟೈಮ್ಸ್ ವೆಬ್'ಸೈಟ್ ಬಿಡುಗಡೆ ಮಾಡಿದೆ. ರಿಲಾಯನ್ಸ್ ಗ್ರೂಪ್'ನ ಪ್ರೊಮೋಟರ್ಸ್ ಸುಮಾರು 2.7 ಸಾವಿರ ಕೋಟಿ ರೂ ನಷ್ಟ ಅನುಭವಿಸಿದೆಯಾದರೂ, ಶೇಕಡಾವಾರು ಪ್ರಮಾಣ ಲೆಕ್ಕ ಹಾಕಿದರೆ ಅದು ನಗಣ್ಯವೆನಿಸುತ್ತದೆ. ಕ್ಯಾಷ್ ವಹಿವಾಟಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಶ್ರೀರಾಮ್ ಚಿಟ್ಸ್ ಕಂಪನಿ ಶೇಕಡಾವಾರು ಲೆಕ್ಕದಲ್ಲಿ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗಿದೆ. ಗುಜರಾತ್'ನ ಉದ್ಯಮಿ ಅದಾನಿಯವರ ಸಂಸ್ಥೆಯೂ ನಷ್ಟ ಅನುಭವಿಸಿದೆ.

ನ.8-21ರ ಅವಧಿಯಲ್ಲಿ ಯಾವ್ಯಾವ ಸಂಸ್ಥೆಗಳಿಗೆ ಆಗಿರುವ ನಷ್ಟವೆಷ್ಟು?
* ಟಾಟಾ ಗ್ರೂಪ್'ನ ವಿವಿಧ ಸಂಸ್ಥೆಗಳ ಪ್ರೊಮೋಟರ್ಸ್: 39,636 ಕೋಟಿ ರೂ
* ಮಹೀಂದ್ರಾ ಗ್ರೂಪ್'ನ ಪ್ರೊಮೋಟರ್ಸ್: 6,100 ಕೋಟಿ ರೂ.
* ಎವಿ ಬಿರ್ಲಾ ಗ್ರೂಪ್ ಪ್ರೊಮೋಟರ್ಸ್: 15,819 ಕೋಟಿ ರೂ.
* ಅಲ್ಟ್ರಾಟೆಕ್'ನ ಪ್ರೊಮೋಟರ್ಸ್: 10,678 ಕೋಟಿ ರೂ.
* ರಿಲಾಯನ್ಸ್ ಗ್ರೂಪ್'ನ ಪ್ರೊಮೋಟರ್ಸ್: 2,760 ಕೋಟಿ ರೂ.
* ಗ್ರಾಸಿಮ್ ಇಂಡಸ್ಟ್ರೀಸ್'ನ ಪ್ರೊಮೋಟರ್ಸ್: 1,520 ಕೋಟಿ ರೂ.
* ಹಿಂಡಾಲ್ಕೋ ಇಂಡಸ್ಟ್ರೀಸ್'ನ ಪ್ರೊಮೋಟರ್ಸ್: 794 ಕೋಟಿ ರೂ.

ಶೇಕಡಾವಾರು ಲೆಕ್ಕದಲ್ಲಿ ಹೆಚ್ಚು ನಷ್ಟ ಅನುಭವಿಸಿದವರು:
* ಶ್ರೀರಾಮ್ ಗ್ರೂಪ್'ನ ಪ್ರೊಮೋಟರ್ಸ್: 21%
* ಪಿರಾಮಲ್ ಗ್ರೂಪ್: 14%
* ಅದಾಗ್ ಗ್ರೂಪ್(ಅನಿಲ್ ಅಂಬಾನಿ ಒಡೆತನದ್ದು): 14%
* ಮುಂಜಲ್: 13.52%
* ಓ.ಪಿ.ಜಿಂದಾಲ್ ಗ್ರೂಪ್: 10%
* ಮುರುಗಪ್ಪ ಗ್ರೂಪ್: 10%
* ಅದಾನಿ: 9.83%

(ಮಾಹಿತಿ: ದಿ ಎಕನಾಮಿಟ್ ಟೈಮ್ಸ್)

click me!