ಹಣದ ಅಪಮೌಲ್ಯೀಕರಣವು ಖಡಕ್ ಚಾಯ್ ಅಲ್ಲ, ಬಡವರಿಗೆ ವಿಷ: ಕೇಜ್ರಿ

By Suvarna web DeskFirst Published Nov 15, 2016, 1:05 PM IST
Highlights

ಹಳೆಯ ನೋಟುಗಳ ಅಪಮೌಲ್ಯೀಕರಣವನ್ನು 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಇದು 'ಜನಸಾಮಾನ್ಯರಿಗೆ ವಿಷವಿದ್ದಂತೆ' ಎಂದು ಕಟುಕಿದ್ದಾರೆ.

ನವದೆಹಲಿ (ನ.15): ಹಳೆಯ ನೋಟುಗಳ ಅಪಮೌಲ್ಯೀಕರಣವನ್ನು 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಇದು 'ಜನಸಾಮಾನ್ಯರಿಗೆ ವಿಷವಿದ್ದಂತೆ' ಎಂದು ಕಟುಕಿದ್ದಾರೆ.

ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಭಾಗವಹಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಬಡವರನ್ನು ಶೋಷಿಸಿ ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ರಕ್ಷಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯು ಇಂತಹ ಬ್ಯುಸಿನೆಸ್ ಮೆನ್ ಗಳ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಆರೋಪಿಸಿದರು.

Latest Videos

ಪ್ರಧಾನಿಯವನ್ನುದ್ದೇಶಿಸಿ, ನೀವು ಹೇಳುತ್ತೀರಿ ಬಡವರು ಕಹಿ ಚಾಯನ್ನು (ಕಡ್ವಿ ಚಾಯ್) ಕುಡಿಯುತ್ತಾರೆಂದು. ಆದರೆ ಕಪ್ಪುಹಣದ ಹೆಸರಿನಲ್ಲಿ ನೀವು ಅವರಿಗೆ ವಿಷವನ್ನು ಕುಡಿಯಲು ಆಫರ್ ನೀಡುತ್ತಿದ್ದೀರಿ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

click me!