ವೈದ್ಯರ ನಿರ್ಲಕ್ಷ್ಯ : ತಲೆಗೆ ಗಾಯಗೊಂಡ ವ್ಯಕ್ತಿಗೆ ಕಾಲಿನ ಶಸ್ತ್ರಚಿಕಿತ್ಸೆ

First Published Apr 23, 2018, 1:17 PM IST
Highlights

ವೈದ್ಯರ  ನಿರ್ಲಕ್ಷ್ಯದ ಬಗ್ಗೆ ಪದೇ ಪದೇ ವರದಿಗಳಾಗುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂತಹ ಘಟನೆಗಳಿಂದ ಜನರು ಆಸ್ಪತ್ರೆಗೆ ತೆರಳಲು ಕೂಡ ಭಯಪಡುವಂತಾಗಿದೆ

ನವದೆಹಲಿ : ವೈದ್ಯರ  ನಿರ್ಲಕ್ಷ್ಯದ ಬಗ್ಗೆ ಪದೇ ಪದೇ ವರದಿಗಳಾಗುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂತಹ ಘಟನೆಗಳಿಂದ ಜನರು ಆಸ್ಪತ್ರೆಗೆ ತೆರಳಲು ಕೂಡ ಭಯಪಡುವಂತಾಗಿದೆ.  

ದಿಲ್ಲಿ ಸರ್ಕಾರದ ನಿರ್ವಹಣೆಯಲ್ಲಿರುವ ಶುಶ್ರುತಾ ಟ್ರೌಮಾ ಸೆಂಟರ್’ನಲ್ಲಿ ಹೆಡ್ ಇಂಜುರಿಯಿಂದ ದಾಖಲಾದ ವ್ಯಕ್ತಿಗೆ ಕಾಲಿನ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಘಟನೆ ಬೆಳಕಿಗೆ ಬಂದಿದೆ.

ವಿಜೇಂದ್ರ ತ್ಯಾಗಿ ಎನ್ನುವವರು ಚಿಕ್ಕ ಅಪಘಾತವೊಂದರಲ್ಲಿ ತಲೆಗೆ ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.  ಈ ವೇಳೆ ಇಲ್ಲಿನ ಸರ್ಜನ್ ಗೊಂದಲಗೊಂಡು ತ್ಯಾಗಿ ಅವರಿಗೆ ತಲೆಯ ಗಾಯಕ್ಕೆ ಉಪಚಾರ ಮಾಡುವ ಬದಲು ಕಾಲಿನ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಅರಿವಳಿಕೆ ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ್ದು ಅವರಿಗೆ ಅದರ ಅರಿವಾಗಲಿಲ್ಲ ಎಂದು ತ್ಯಾಗಿ ಕುಟುಂಬಸ್ಥರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಾಮಾ ಸೆಂಟರ್ ಮೆಡಿಕಲ್ ಸೂಪರಿಂಟೆಂಡೆಂಟ್  ಕರ್ತವ್ಯ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

click me!