
ಮೈಸೂರು: ಬಿಜೆಪಿ ಮುಖಂಡರಾಗಿರುವ ನಗರ ಪಾಲಿಕೆ ಮಾಜಿ ಶಾಸಕ ಎಂ.ಸಿ.ಚಿಕ್ಕಣ್ಣ ಅವರಿಗೆ .51 ಸಾವಿರ ಮಾನನಷ್ಟಪರಿಹಾರ ನೀಡುವಂತೆ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಶಾಸಕ ಸೋಮಶೇಖರ್ ಅವರು ತಾನು ಪ.ಪಂಗಡಕ್ಕೆ ಸೇರಿದವನೆಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯ ಗ್ಯಾಸ್ ಏಜೆನ್ಸಿ ಡೀಲರ್‌ಶಿಪ್ ಪಡೆದಿದ್ದಾರೆಂದು 2008ರ ಸೆಪ್ಟೆಂಬರ್‌ನಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದರು. ತಾನು ನಿರುದ್ಯೋಗಿ ಪದವೀಧರರ ಕೋಟಾದಿಂದ ಗ್ಯಾಸ್ ಏಜೆನ್ಸಿ ಪಡೆದಿರುವುದಾಗಿ ಸೋಮಶೇಖರ್ ವಾದಿಸಿದ್ದರು. ಇಷ್ಟೇ ಅಲ್ಲದೆ ಚಿಕ್ಕಣ್ಣನವರು ನಗರ ಪಾಲಿಕೆಯಲ್ಲಿ ಜೀವನದುದ್ದಕ್ಕೂ ರೋಲ್ ಕಾಲ್ ಮಾಡುತ್ತಿದ್ದುದರಿಂದ ಈವರೆಗೂ ಮೇಯರ್ ಆಗಿಲ್ಲ ಎಂದು ಆರೋಪಿಸಿದ್ದರು.
ಈ ವಿಷಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಈ ವಿಚಾರವಾಗಿ ಸೋಮಶೇಖರ್ ಮೊಕದ್ದಮೆ ಹೂಡಿದ್ದರು. ಎಂ.ಸಿ. ಚಿಕ್ಕಣ್ಣ ಅವರ ಪರವಾಗಿ ವಕೀಲ ಸಿ.ವಿ. ಕೇಶವಮೂರ್ತಿ ವಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.